ಬೆಂಗಳೂರು: ಮಹಿಳೆಯೊಬ್ಬರೂ ನೀಡಿದ ದೂರಿನ ಆಧಾರದ ಮೇಲೆ ಆತ್ಯಾಚಾರ ಪ್ರಕರಣದಲ್ಲಿ ಬಂಧನವಾಗಿರುವ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಅಕ್ಟೋಬರ್.5 ರವರೆಗೆ ನ್ಯಾಯಾಂಗ ಬಂಧನದಲ್ಲಿರಿಸಿ ಕೋರ್ಟ್ ಆದೇಶ ಹೊರಡಿಸಿದೆ.
ಬೆಂಗಳೂರಿನ ಆರ್.ಆರ್.ನಗರ ಬಿಜೆಪಿ ಶಾಸಕ ಮುನಿರತ್ನ ಅವರನ್ನು, ಸಂತ್ರಸ್ಥೆ ನೀಡಿದ ದೂರಿನ ಆಧಾರದ ಮೇಲೆ ಕಗ್ಗಲಿಪುರ ಪೊಲೀಸರು ಆತ್ಯಾಚಾರ ಪ್ರಕರಣದಲ್ಲಿ ಬಂಧಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಚಾರಣೆ ನಡೆಸಿದ ನ್ಯಾಯಾಲಯವ ಮುಂದಿನ 14 ದಿನಗಳವರೆ ಅಂದರೆ ಅಕ್ಟೋಬರ್.5ರವರೆಗೆ ನ್ಯಾಯಾಂಗ ಬಂಧನದಲ್ಲಿರುವಂತೆ ಆದೇಶ ನೀಡಿದೆ.
ಮುನಿರತ್ನ ಅವರನ್ನು ಈ ಮೊದಲು, ಬೆಂಗಳೂರು ಮಹಾನಗರ ಪಾಲಿಕೆ ಗುತ್ತಿಗೆದಾರ ಜಾತಿ ನಿಂದನೆ ಹಾಗೂ ಬೆದರಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾತ್ತು. ಈ ಪ್ರಕರಣದ ಕುರಿತು ಗುರುವಾರ(ಸೆ.19)ರಂದು ಜಾಮೀನು ಪಡೆದಿದ್ದರು. ಇದಾದ ಬಳಿಕ ಅವರನ್ನು ಆತ್ಯಾಚಾರ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದರು.
ವಿಚಾರಣೆ ವೇಳೆ ಅಸಮಾಧಾನ ಹೊರಹಾಕಿದ ಶಾಸಕ ಮುನಿರತ್ನ ಅವರು, ಲೋಕಸಭಾ ಚುನಾವಣೆ ನಡೆದ ನಂತರ ನನ್ನನ್ನು ಜೈಲಿನಲ್ಲಿ ಇರಿಸಲು ಸಂಪೂರ್ಣ ಯೋಜನೆ ಮಾಡಲಾಗಿದೆ. ಹೀಗಾಗಿ ಆಕೆಯಿಂದ ಐದು ವರ್ಷಗಳ ನಂತರ ಆತ್ಯಾಚಾರದ ದೂರು ನೀಡಿಸಿದ್ದಾರೆ ಎಂದರು. ನಾನು ಜನಪ್ರತಿನಿಧಿಯಾದವನು, ನನಗೆ ಸಾರ್ವಜನಿಕರ ಹತ್ತಿರ ಹೇಗೆ ನಡೆದುಕೊಳ್ಳಬೇಕು ಎಂಬುದು ಗೊತ್ತಿದೆ. ನಾನು ಈ ನ್ಯಾಯಾಲಯದಲ್ಲೇ ರಾಜೀನಾಮೆ ಬೇಕಾದರೂ ನೀಡುತ್ತೇನೆ. ಆದರೆ ನನ್ನಿಂದ ಇಂತಹ ಹಿಂಸೆಯನ್ನು ಅನುಭವಿಸಲು ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.