Mysore
21
overcast clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ರೊಚ್ಚಿಗೆದ್ದ ದಸರಾ ಆನೆ ಕಂಜನ್:‌ ಧಿಕ್ಕಾಪಾಲಾಗಿ ಓಡಿದ ಜನ

ಅರಮನೆಯಿಂದ ಏಕಾಏಕಿ ಓಡಿಬಂದ ಕಂಜನ್‌ ಆನೆ

ಮೈಸೂರು: ನಾಡಹಬ್ಬ ದಸರೆಗೆ ಬಂದಿದ್ದ ಧನಂಜಯ ಹಾಗೂ ಕಂಜನ್‌ ಆನೆ ನಡುವೆ ಗುದ್ದಾಟ ನಡೆದಿದ್ದು, ಬಳಿಕ ಕಂಜನ್‌ ಆನೆ ಅರಮನೆಯ ಜಯಮಾರ್ತಾಂಡ ದ್ವಾರದ ಆವರಣ ಮೂಲಕ ರಸ್ತೆಗೆ ನುಗ್ಗಿದ ಘಟನೆ ಶುಕ್ರವಾರ ರಾತ್ರಿ 8ರ ಸುಮಾರಿಗೆ ನಡೆದಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾತಲಾಣದಲ್ಲಿ ಹರಿದಾಡಿದೆ.

ಕಂಜನ್‌ ಹಾಗೂ ಧನಂಜಯ ನಡುವೆ ಗುದ್ದಾಟ ನಡೆದಿದ್ದು, ಈ ವೇಳೆ ಕಂಜನ್‌ ಕಾಲಿಗೆ ಕಟ್ಟಿದ್ದ ಸರಪಳಿಯನ್ನು ಬಿಡಿಸಿಕೊಂಡು ಅರಮನೆಯಾಚೆಗೆ ಬಂದಿದ್ದಾನೆ. ಅವನನ್ನು ಹಿಡಿದು ತರಲು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಮಾವುತರು ಹರಸಾಹಸ ಪಡುತ್ತಿರುವ ದೃಶ್ಯ ಸೆರೆಯಾಗಿದೆ.

ಓಡಿಹೋದ ಕಂಜನ್‌ನನ್ನು ನಿಯಂತ್ರಿಸಿಲು ಧನಂಜಯ ಹಿಂದಿನಿಂದ ಓಡಿತು. ಈ ವೇಳೆ ಜನರು ಆನೆ ಓಡಿಬರುವುದನ್ನು ನೋಡಿ ದಿಕ್ಕಾಪಾಲಾಗಿ ಓಡಿದರು.

ದೊಡ್ಡಕೆರೆ ಮೈದಾನದ ರಸ್ತೆಗೆ ಬಂದಿದ್ದ ಕಂಜನ್‌, ವಾಹನಗಳನ್ನು ನೋಡಿ ಬೆದರಿ ನಿಂತಿದ್ದಾನೆ. ಮಾವುತರು ಕಾವಾಡಿಗರು ಸಮಾಧಾನ ಪಡಿಸಿ, ಆನೆಗಳ ಆಟೋಟಕ್ಕೆ ಬ್ರೇಕ್‌ ಹಾಕಿದ್ದಾರೆ. ಸದ್ಯ ಎರಡು ಆನೆಗಳು ಅರಮನೆ ಆವರಣ ಸೇರಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ.

 

Tags: