Mysore
19
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಆಂದೋಲನ ಫಲಶ್ರುತಿ: ಕೊನೆಗೂ ತೆರವಾಯ್ತು ಬೃಹತ್‌ ಮರದ ಕಾಂಡ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜುಂಬೂ ಸವಾರಿ ಸಾಗುವ ಮಾರ್ಗದಲ್ಲಿ ಕಳೆದ ಎರಡೂ ವರ್ಷಗಳಿಂದ ಬಿದ್ದಿದ್ದ ಬೃಹತ್ ಮರದ ಕಾಂಡವನ್ನು ಮೈಸೂರು ಮಹಾನಗರ ಪಾಲಿಕೆ ಗುರುವಾರ ತೆರವು ಮಾಡಿದೆ.

‘ಜಂಬೂ ಸವಾರಿ ಮಾರ್ಗದ ಮರ ತೆರವಾಗುತ್ತಾ’ ಶೀರ್ಷಿಕೆಯಡಿ ಪ್ರಕಟವಾಗಿದ್ದ ‘ಆಂದೋಲನ’ದ ವರದಿಗೆ ಸ್ಪಂದಿಸಿದ ಮೈಸೂರು ಮಹಾನಗರ ಪಾಲಿಕೆ ತೋಟಗಾರಿಕೆ ವಿಭಾಗದ ಸಹಾಯಕ ನಿರ್ದೇಶಕ ಮೋಹನ್ ಅವರು ಬೃಹತ್ ಮರದ ಕಾಂಡ ತೆರವು ಮಾಡಲು ಕಾಳಜಿ ವಹಿಸಿದ್ದಾರೆ.

ಎರಡು ಜಂಬೂ ಸವಾರಿ ಮೆರವಣಿಗೆಯನ್ನು ಕಂಡಿದ್ದ ಬೃಹತ್ ಮರದ ಕಾಂಡವನ್ನು ಸುಮಾರು ೫ ಗಂಟೆಗಳ ಕಾಲ ಸಾಹಸ ಪಟ್ಟು ಜೆಸಿಬಿ ಹಾಗೂ ದೊಡ್ಡ ಗರಗಸ ಬಳಸಿ ಮರವನ್ನು ತುಂಡು ತುಂಡಾಗಿ ಕತ್ತರಿಸಿ ಟ್ರಕ್‌ನಲ್ಲಿ ವಿದ್ಯಾರಣ್ಯಪುರಂನ ಸುಯೇಜ್ ಫಾರಂಗೆ ಸಾಗಿಸಲಾಯಿತು. ಕಾರ್ಯಚರಣೆಯಲ್ಲಿ ೭ ಮಂದಿ ಸಿಬ್ಬಂದಿ ಭಾಗವಹಿಸಿ ತೆರವು ಕಾರ್ಯ ಯಶಸ್ವಿಗೊಳಿಸಿದ್ದಾರೆ

 

Tags: