Mysore
21
overcast clouds
Light
Dark

ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ: ಕೆ.ಎಂ.ಗಾಯಿತ್ರಿ

ಮಾನವನ ಜೀವ ಅಮೂಲ್ಯವಾಗಿದ್ದು: ಜಿ.ಪಂ ಸಿಇಒ

ಮೈಸೂರು: ಮಾನವ ಜೀವನ ಎಂಬುದು ಅಮೂಲ್ಯವಾಗಿದ್ದು, ಜೀವನದಲ್ಲಿ ಯಾವುದೇ ಸಮಸ್ಯೆ ಎದುರಾದರೂ ಅತ್ಮವಿಶ್ವಾಸದಿಂದ ಎದುರಿಸಬೇಕು. ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ ಎಂದು ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಕೆ.ಎಂ.ಗಾಯತ್ರಿ  ತಿಳಿಸಿದರು.

ಇಂದು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿ ಯುವರಾಜ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಕಾರ್ಯಕ್ರಮವನ್ನು ಉದ್ಫಾಟಿಸಿ ಮಾತನಾಡಿದ ಅವರು, ಜೀವನದಲ್ಲಿ ಎದುರಾಗುವ ಕಷ್ಟಗಳು ಕ್ಷಣಿಕವಾಗಿದ್ದು, ಯಾವುದೇ ಒಂದು ಕಷ್ಟ ದುಃಖಗಳು ಬಂದಾಗ ಅದನ್ನೇ ಯೋಚಿಸುತ್ತಾ ಕೂರಬಾರದು ಪರಿಹಾರವೂ ಸಹ ನಮ್ಮಲ್ಲೇ ಇರುತ್ತದೆ. ಅದಕ್ಕೆ ಪರಿಹಾರಗಳನ್ನು ಹುಡುಕಿ ಬದುಕನ್ನು ಕಟ್ಟಿಕೊಳ್ಳುವುದೇ ಆತ್ಮವಿಶ್ವಾಸ ಎಂದು ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾದೀಶರಾದ ದಿನೇಶ್.ಬಿ.ಜಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಒತ್ತಡ ಎಂಬುದು ಎಲ್ಲಾ ಕ್ಷೇತ್ರದಲ್ಲಿಯೂ ಆವರಿಸಿಕೊಂಡಿದೆ. ಚಿಕ್ಕ ಮಕ್ಕಳಿಂದ ಯುವಜನತೆಯವರೆಗೂ ಒತ್ತಡ ಎಂಬುದು ಸಾಮಾನ್ಯ ವಿಷಯವಾಗಿದೆ. ಅಲ್ಲದೆ ಯುವ ಜನತೆಯು ಪ್ರೀತಿ ಪ್ರೇಮ ಡ್ರಗ್ಸ್ ವಿದ್ಯಾಭ್ಯಾಸದ ಒತ್ತಡ, ಕುಡಿತದ ಚಟ, ನಿರುದ್ಯೋಗ ದಂತಹ ಸಮಸ್ಯೆಗಳಿಂದ ಆತ್ಮಹತ್ಯೆಗೆ ಮುಂದಾಗುತ್ತಿದ್ದಾರೆ ಇದು ವಿಷಾದಕರ ಸಂಗತಿ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗ ಡಾ ಪಿ ಸಿ ಕುಮಾರಸ್ವಾಮಿ ಮಾತನಾಡಿ, ಅಂಕಿ ಅಂಶಗಳ ಪ್ರಕಾರ ರಾಷ್ಟ್ರ ಮಟ್ಟದಲ್ಲಿ ಸುಮಾರು 1.7 ಲಕ್ಷ ಜನರು ಪ್ರತಿ ವರ್ಷ ಆತ್ಮಹತ್ಯೆಗೆ ಒಳಗಾಗುತ್ತಿದ್ದಾರೆ. ಅದರಲ್ಲಿಯೂ ಪುರುಷರು ಹೆಚ್ಚು ಆತ್ಮಹತ್ಯೆಗೀಡಾಗುತ್ತಿದ್ದಾರೆ. 15 ರಿಂದ 25 ವರ್ಷ ವಯೋಮಾನದವರು ಅತಿ ಹೆಚ್ಚು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಅಂಕಿ ಅಂಶಗಳಿಂದ ತಿಳಿದುಬಂದಿದೆ ಎಂದು ಹೇಳಿದರು.

ಜೆ.ಎಸ್.ಎಸ್ ಆಸ್ಪತ್ರೆಯ ಮನೋರೋಗ ವಿಭಾಗದ ಪ್ರಾಧ್ಯಾಪಕ ಡಾ ಟಿ.ಎಸ್ ಸತ್ಯನಾರಾಯಣ ರಾವ್ ವಿದ್ಯಾರ್ಥಿಗಳೊಡನೆ ಸಂವಾದ ನಡೆಸಿ ತಮ್ಮ ಅನುಭವಗಳನ್ನು ಹಂಚಿಕೊoಡರು.

ಕಾರ್ಯಕ್ರಮದಲ್ಲಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ. ಬೃಂದಾ, ಯುವರಾಜ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಸೋಮಶೇಖರಪ್ಪ, ಪ್ರೊ.ಎಂಕೆ ಮಹೇಶ್  ಉಪಸ್ಥಿತರಿದ್ದರು.