ಬೆಂಗಳೂರು: ‘ಮಲ್ಟಿಫ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ’ ವತಿಯಿಂದ ಸೆ.20ರಂದು ರಾಷ್ಟ್ರೀಯ ಸಿನಿಮಾ ದಿನದ ಪ್ರಯುಕ್ತ ಚಲನಚಿತ್ರ ಪ್ರಿಯರಿಗೆ ರಾಷ್ಟ್ರವ್ಯಾಪಿ ಚಿತ್ರಮಂದಿರಗಳಲ್ಲಿ ಟಿಕೆಟ್ ದರವನ್ನು 99 ರೂ.ಗೆ ಇಳಿಕೆ ಮಾಡಿ ಸಿನಿಮಾ ವೀಕ್ಷಕರಿಗೆ ಸಿಹಿ ಸುದ್ದಿ ನೀಡಲು ನಿರ್ಧರಿಸಿದೆ.
ರಾಷ್ಟ್ರೀಯ ಸಿನಿಮಾ ದಿನದ ಅಂಗವಾಗಿ ಸೆ.20ರಂದು ಸಿನಿಮಾ ವೀಕ್ಷಿಸುವ ಪ್ರೇಕ್ಷಕರಿಗೆ ಕೈಗೆಟುಕುವ ಬೆಲೆಯಲ್ಲಿ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. ಅಲ್ಲದೆ ಆ ದಿನ ಸಿನಿಪೊಲೀಸ್, ಪಿವಿಆರ್, ಐನಾಕ್ಸ್, ಮೀರಜ್, ಸಿಟಿಪ್ರೈಡ್ ಒಳಗೊಂಡಂತೆ ಇನ್ನಿತರ 4000ಕ್ಕೂ ಅಧಿಕ ಥಿಯೇಟರ್‌ಗಳಲ್ಲಿ ರಾಷ್ಟ್ರೀಯ ಸಿನಿಮಾ ದಿನವನ್ನು ಆಚರಸಲಿದೆ. ಹೀಗಾಗಿ ದೇಶದ್ಯಾಂತ ಸಿನಿಮಾ ವೀಕ್ಷಿಸುವ ಪ್ರೇಕ್ಷಕರು ಕೇವಲ 99 ರೂ.ಗೆ ಚಲನಚಿತ್ರ ನೋಡುವ ಅವಕಾಶ ನೀಡಲಾಗಿದೆ.
ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಟಿಕೆಟ್ ದರ ಇಳಿಕೆ ಮಾಡಿರುವುದಲ್ಲದೆ, ಚಿತ್ರಮಂದಿರಗಳಲ್ಲೇ ಆಹಾರ ಪದಾರ್ಥಗಳ ಮೇಲೆ ಒಳ್ಳೆಯ ಆಫರ್‌ಗಳನ್ನು ನೀಡಿದೆ. ಪ್ರಸ್ತುತ ರಾಜ್ಯದಲ್ಲಿ ಕೃಷ್ಣಂ ಪ್ರಣಯ ಸಖಿ, ಇಬ್ಬನಿ ತಬ್ಬಿದ ಇಳೆಯಲಿ, ಸ್ತ್ರೀ 2, ಇನ್ನಿತರ ಚಲನಚಿತ್ರಗಳು ಚಿತ್ರಮಂದಿರಗಳಲ್ಲಿ ಸದ್ದು ಮಾಡುತ್ತಿವೆ. ಈ ಮಧ್ಯೆ ಟಿಕೆಟ್ ದರವನ್ನು 99 ರೂ.ಗೆ ಇಳಿಕೆ ಮಾಡಿ ಸಿನಿಮಾ ಪ್ರಿಯರಿಗೆ ಸಿಹಿ ಸುದ್ದಿ ಕೊಟ್ಟಿದೆ. ಈ ಕುರಿತು ಥಿಯೇಟರ್‌ಗಳ ವೈಬ್‌ಸೈಟ್‌ನಲ್ಲಿ ಸಂಪೂರ್ಣ ವಿವರ ದೊರಕಲಿದೆ. ಅಷ್ಟೇ ಅಲ್ಲದೆ ಆನ್‌ಲೈನ್‌ನಲ್ಲಿ ಸಹ ಸಿನಿಮಾ ಟಿಕೆಟ್ ಬುಕ್ಕಿಂಗ್ ಅವಕಾಶ ಕಲ್ಪಿಸಲಾಗಿದೆ.