Mysore
18
broken clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಉಚಿತ ವಿದ್ಯುತ್‌ ಯೋಜನೆ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ ಮೋದಿ

ಗಾಂಧಿನಗರ (ಗುಜರಾತ್):‌ ಪಿಎಂ ನರೇಂದ್ರ ಮೋದಿ ಅವರು ಇಂದು ( ಸೆಪ್ಟೆಂಬರ್‌ 18 ) ಬೆಳಿಗ್ಗೆ 10 ಗಂಟೆಗೆ ಗಾಂಧಿನಗರದ ವಾವೋಲ್‌ನಲ್ಲಿರುವ ಶಾಲಿನ್‌-2 ಸೊಸೈಟಿಯಲ್ಲಿ ʼಪಿಎಂ ಸೂರ್ಯ ಘರ್: ಉಚಿತ ವಿದ್ಯುತ್ ಯೋಜನೆ’ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು.

ಕೇಂದ್ರ ಸರ್ಕಾರದ ಪ್ರಮುಖ ಯೋಜನೆಯಾದ ಪಿಎಂ ಸೂರ್ಯ ಘರ್: ಉಚಿತ ವಿದ್ಯುತ್ ಯೋಜನೆಯನ್ನು 2024ರ ಫೆ.29 ರಂದು ಸುಮಾರು 75, 021 ಕೋಟಿ ರೂ.ಗಳ ಯೋಜನೆ ಅಡಿಯಲ್ಲಿ ಗುಜರಾತ್‌ ರಾಜ್ಯದ ಮನೆಗಳ ಮೇಲ್ಛಾವಣಿಯಲ್ಲಿ ಸೌರ ಫಲಕಗಳನ್ನು ಅಳವಡಿಸಲಾಗಿತ್ತು. ಇಂದು ಪ್ರಧಾನಿ ಮೋದಿ ಅವರು ಹಲವಾರು ನಿವಾಸಿಗಳೊಂದಿಗೆ ಸಂವಾದ ನಡೆಸಿದ್ದಾರೆ.

ಮೋದಿ ಅವರು ಸಂವಾದ ನಡೆಸುವ ಸಂದರ್ಭದಲ್ಲಿ ಫಲಾನುಭವಿಗಳಿಗೆ, ಕೇಂದ್ರ ಸರ್ಕಾರದ ಪ್ರಮುಖ ಉದ್ದೇಶ ಮನೆಗಳ ಮೇಲ್ಛಾವಣಿಯಲ್ಲಿ ಸೌರಫಲಕಗಳನ್ನು ಅಳವಡಿಸುವುದಾಗಿತ್ತು. ಏಕೆಂದರೆ ಇದರಿಂದ ತಮ್ಮ ವಸತಿ ಗೃಹಗಳಲ್ಲಿ ಸ್ವಂತ ವಿದ್ಯುತ್‌ ಉತ್ಪಾದಿಸಲು ಅವಕಾಶ ಮಾಡಿಕೊಡಲಾಗುತ್ತದೆ. ಒಟ್ಟು ವಿದ್ಯುತ್‌ ವೆಚ್ಚದಲ್ಲಿಯೂ ಸರ್ಕಾರಕ್ಕೆ ಉಳಿತಾಯವಾಗುವಂತೆ ಮಾಡುತ್ತದೆ. ಅಲ್ಲದೆ ನೂತವಾಗಿ ವಿದ್ಯುತ್‌ನ್ನು ನವೀಕರಿಸಬಹುದಾದ ಶಕ್ತಿಯ ಸದ್ಬಳಕೆ ಮಾಡಬಹುದು ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಈ ವಿಚಾರದ ಕುರಿತು ತಮ್ಮ ಎಕ್ಸ್‌ ಖಾತೆಯಲ್ಲಿ ಈ ರೀತಿಯಾಗಿ ಬರೆದುಕೊಂಡಿದ್ದಾರೆ. ʼನಾನು ಇತ್ತೀಚೆಗೆ ಗುಜರಾತ್​ಗೆ ಭೇಟಿ ನೀಡಿದ್ದಾಗ ಶಗಶಿಭಾಯಿ ಸುತಾರ್ ಅವರ ಮನೆಗೆ ಹೋಗಿದ್ದೆ, ಅವರ ಕುಟುಂಬವು ಪಿಎಂ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಯಿಂದ ಪ್ರಯೋಜನ ಪಡೆದಿದೆ. ನಾನು ಇತರೆ ಫಲಾನುಭವಿಗಳನ್ನು ಕೂಡ ಭೇಟಿಯಾದೆʼ ಎಂದು ಅವರ ಹೈಲೈಟ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

Tags: