Mysore
22
overcast clouds

Social Media

ಮಂಗಳವಾರ, 23 ಜೂನ್ 2026
Light
Dark

ಇಂದು ಜನಿಸಿದ ಪುತ್ರನಿಗೆ ನರೇಂದ್ರ ಎಂದು ಹೆಸರಿಟ್ಟ ಕೊಡಗಿನ ದಂಪತಿ

ಮಡಿಕೇರಿ: ಪ್ರಧಾನಿ ನರೇಂದ್ರ ಮೋದಿ ಜನ್ಮದಿನವಾದ ಹಿನ್ನೆಲೆಯಲ್ಲಿ ಇಂದು ಜನಿಸಿದ ಗಂಡು ಮಗುವಿಗೆ ಕೊಡಗಿನ ದಂಪತಿ ನರೇಂದ್ರ ಎಂದು ಹೆಸರಿಟ್ಟು ಎಲ್ಲರ ಗಮನ ಸೆಳೆದಿದ್ದಾರೆ.

ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಸುಂದರ ನಗರದ ನಿವಾಸಿಗಳಾದ ಜಯಲಕ್ಷ್ಮೀ ಹಾಗೂ ಮಹೇಂದ್ರ ಎಂಬುವವರಿಗೆ ಇಂದು ಗಂಡು ಮಗು ಜನಿಸಿದೆ.

ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಹುಟ್ಟುಹಬ್ಬವಾದ ಹಿನ್ನೆಲೆಯಲ್ಲಿ ದಂಪತಿಗಳು ಮಗುವಿಗೆ ನರೇಂದ್ರ ಎಂದು ಹೆಸರಿಟ್ಟು ಎಲ್ಲರ ಗಮನ ಸೆಳೆದಿದ್ದಾರೆ.

ದೇಶದ ಪ್ರಧಾನಿಯಂತೆಯೇ ನಮ್ಮ ಮಗು ಸಹ ಬೆಳೆದ ನಾಡಿಗೆ ಒಳಿತು ಮಾಡಲಿ. ನಮ್ಮ ಮಗು ಪ್ರಧಾನಿ ನರೇಂದ್ರ ಮೋದಿ ಅವರಂತೆ ಉನ್ನತ ಮಟ್ಟದ ಸಾಧನೆ ಮಾಡಲಿ ಎಂದು ಅವರ ಹೆಸರನ್ನೇ ಇಟ್ಟಿದ್ದೇವೆ ಅಂತಾ ಪೋಷಕರು ಖುಷಿಪಟ್ಟಿದ್ದಾರೆ.

 

Tags:
error: Content is protected !!