ನವದೆಹಲಿ: ವಿಪಕ್ಷ ನಾಯಕ ರಾಹುಲ್ ಗಾಂಧಿ ಮೀಸಲಾತಿ ರದ್ದುಪಡಿಸಸುವುದಾಗಿ ಹೇಳಿಕೆ ನೀಡಿರುವ ಬೆನ್ನಲ್ಲೇ ರಾಹುಲ್ ಅವರ ನಾಲಿಗೆಯನ್ನು ಕತ್ತರಿಸಿದರೆ 11 ಲಕ್ಷ ರೂ.ಬಹುಮಾನ ನೀಡುತ್ತೇನೆ ಎಂದು ಬುಲ್ದಾನ ಕ್ಷೇತ್ರದ ಶಿವಸೇನಾ ಶಾಸಕ ಸಂಜಯ್ ಗಾಯಕ್ವಾಡ್ ಘೋಷಿಸಿದ್ದಾರೆ.
ಮೀಸಲಾತಿ ಬಗ್ಗೆ ರಾಹುಲ್ ನೀಡಿರುವ ಹೇಳಿಕೆಯೂ ಕಾಂಗ್ರೆಸ್‌ನ ಸತ್ಯ ಮುಖವನ್ನು ಬಹಿರಂಗಪಡಿಸಿದಂತಿದೆ ಎಂದು ಸೋಮವಾರ ಆರೋಪಿಸಿದ್ದಾರೆ.
ಬಿಜೆಪಿಯಿಂದ ಸಂವಿಧಾನಕ್ಕೆ ಅಪಾಯವಿದ್ದು, ಬಿಜೆಪಿಯವರು ಸಂವಿಧಾನವನ್ನು ಬದಲಾಯಿಸುತ್ತಾರೆ ಎಂದು ಸುಳ್ಳು ಹೇಳುವ ಮೂಲಕ ಲೋಕ ಚುನಾವಣೆಯಲ್ಲಿ ಕಾಂಗ್ರಸ್ ಮತ ಪಡಿದಿದೆ. ಆದರೆ, ಅಮೆರಿಕಾದಲ್ಲಿ ರಾಹುಲ್ ಅವರು ಮೀಸಲಾತಿಯನ್ನು ಕೊನೆಗೊಳಿಸುತ್ತೇವೆ ಎಂಬ ಹೇಳಿಕೆ ನೀಡಿದ್ದಾರೆ. ರಾಹುಲ್ ಅವರ ಬಾಯಿಂದ ಈ ಮಾತನ್ನು ನೀರೀಕ್ಷಿಸರಿರಲಿಲ್ಲ ಎಂದು ಬೇಸರ ಅವರು ವ್ಯಕ್ತಪಡಿಸಿದರು.
ರಾಗಾ ಅಮೆರಿಕಾದಲ್ಲಿ ಹೇಳಿರುವುದೇನು..?
ಪ್ರಸ್ತುತ ಅಮೆರಿಕಾ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಅವರು, ಭಾರತದಲ್ಲಿ ಸಮಾನತೆಯ ಸ್ಥಿತಿ ನೋಡಿದ ನಂತರ ಮುಂದಿನ ದಿನಗಳಲ್ಲಿ ಮೀಸಲಾತಿ ರದ್ದತಿ ಕುರಿತು ಕಾಂಗ್ರೆಸ್ ಚಿಂತಿಸಲಿದೆ ಎಂದು ಹೇಳಿದ್ದಾಗಿ ವರದಿಯಾಗಿತ್ತು. ಬಳಿಕ ರಾಹುಲ್ ಅವರು ಮಾಧ್ಯಮ ಸಂವಾದದಲ್ಲಿ ನನ್ನ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಿದ್ದಾರೆ. ಆದರೆ ನಾನು ಶೇ.50 ರಷ್ಟು ಮೀರಿ ಮೀಸಲಾತಿಯನ್ನು ವಿಸ್ತರಿಸಲಿದ್ದೇವೆ ಎಂದು ಹೇಳಿದ್ದರು.