Mysore
22
broken clouds
Light
Dark

ನಾಗಮಂಗಲ ಗಲಭೆ: ಎನ್‌ಐಎ ತನಿಖೆ ಬಗ್ಗೆ ಸಿಎಂ ಬಳಿ ಚರ್ಚಿಸಿ ತೀರ್ಮಾನ: ಚಲುವರಾಯಸ್ವಾಮಿ

ಮಂಡ್ಯ: ನಾಗಮಂಗಲ ಗಲಭೆಯಲ್ಲಿ ಕೇರಳ ಮೂಲದ ಇಬ್ಬರು ಪಾಲ್ಗೊಂಡಿದ್ದ ಬಗ್ಗೆ ತನಿಖೆ ಮಾಡಿಸುತ್ತೇವೆ. ಈ ಕುರಿತು ರಾಷ್ಟ್ರೀಯ ತನಿಖಾ ದಳದಿಂದ(ಎನ್‌ಐಎ) ತನಿಖೆ ಮಾಡಿಸುವ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ತೀರ್ಮಾನ ತೆಗದುಕೊಳ್ಳಲಾಗುವುದು ಎಂದು ಸಚಿವ ಎನ್‌ ಚಲುವರಾಯಸ್ವಾಮಿ ಹೇಳಿದರು.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೇರಳ ಮೂಲದ ಇಬ್ಬರು ನಾಗಮಂಗಲದ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ಸಹ ಗಲಭೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಎಫ್‌ಐಆರ್‌ ಕೂಡ ದಾಖಲಾಗಿದೆ ಎಂದರು.

ಗಲಭೆ ಸಂಬಂಧ ದೂರು ದಾಖಲಾಗಿರುವ 74ಆರೋಪಿಗಳ ಪೈಕಿ ನಿಷೇಧಿತ ಪಿಎಫ್‌ಐ ಸಂಘಟನೆ ಸದಸ್ಯರಾದ 44ನೇ ಆರೋಪಿ ಯೂಸುಫ್‌,61ನೇ ಆರೋಪಿ ನಾಸೀರ್‌ ಎಂಬುವವರು ಕೇರಳ ಮೂಲದ ಮಲ್ಲಪುರಂ ನಿವಾಸಿಗಳು ಎನ್ನಲಾಗಿದೆ.