ಬಿಳಿಕೆರೆ(ಹುಣಸೂರು): ಪತಿಯ ಅನೈತಿಕ ಸಂಬಂಧವನ್ನು ಪ್ರಶ್ನಿಸಿದ ಪತ್ನಿಯನ್ನೇ ಮಾರಕಾಸ್ರ್ತದಿಂದ ಕುತ್ತಿಗೆ ಕಡಿದು ಹತೈಗೈದಿರುವ ಘಟನೆ ಹೋಬಳಿಯ ಬೆಂಕಿಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಪಾಪನಾಯಕ ಅವರ ಪುತ್ರಿ ರೋಜಾ(33) ಕೊಲೆಯಾದ ಮಹಿಳೆ. ದಿ.ಪೀರನಾಯಕ ಪುತ್ರ ಸ್ವಾಮಿನಾಯಕ ಕೊಲೆ ಆರೋಪಿ.
ಕೋಲೆ ಆರೋಪಿ ಸ್ವಾಮಿನಾಯಕ ಅನೈತಿಕ ಸಂಬಂಧ ಹೊಂದಿದ್ದ. ಈ ವಿಚಾರವಾಗಿ ಮನೆಯಲ್ಲಿ ಆಗಾಗ್ಗೆ ಗಲಾಟೆ ಸಹ ನಡೆಯುತ್ತಿತ್ತು. ಇಂದು ಮಧ್ಯಾಹ್ನಾ ಮನೆಯಲ್ಲಿ ಗಲಾಟೆ ಆರಂಭವಾಗಿ ಪತ್ರಿ ರೋಜಾಳನ್ನು ಮಾರಕಾಸ್ರ್ತದಿಂದ ಹತೈಗೈದು ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ.
ಘಟನೆ ವಿವರ: ಬೆಂಕಿಪುರ ಗ್ರಾಮದ ಸ್ವಾಮಿನಾಯಕನಿಗೆ 12 ವರ್ಷಗಳ ಹಿಂದೆ ಅದೇ ಗ್ರಾಮದ ರೋಜಾ ಅವರೊಂದಿಗೆ ವಿವಾಹವಾಗಿ ಎರಡು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದನು. ಸ್ವಾಮಿನಾಯಕ ಹೊಂದಿದ್ದ ಎನ್ನಲಾದ ಅಕ್ರಮ ಸಂಬಂಧದ ಬಗ್ಗೆ ದಂಪತಿಯಲ್ಲಿ ಆಗಾಗ್ಗೆ ಜಗಳ ನಡೆಯುತ್ತಿತ್ತು. ರೋಜಾ ಮೂರು ತಿಂಗಳ ಹಿಂದೆ ಅದೇ ಗ್ರಾಮದಲ್ಲಿರುವ ತನ್ನ ತಾಯಿ ಮನೆಗೆ ಹೋಗಿದ್ದರು.
ಭಾನುವಾರ ಬೆಳಿಗ್ಗೆ ಬೀದಿ ನಲ್ಲಿಯಲ್ಲಿ ರೋಜಾ ನೀರು ತರಲು ಹೋಗಿದ್ದ ವೇಳೆ ತೆಂಗಿನ ಕಾಯಿ ಕೀಳುವ ಕತ್ತಿ ಹಿಡಿದು ಬಂದ ಸ್ವಾಮಿನಾಯಕ ಏಕಾಏಕಿ ರೋಜಾ ಅವರ ಬೆನ್ನು, ಕುತ್ತಿಗೆ ಮತ್ತಿತರ ಕಡೆಗೆ ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ. ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ರೋಜಾರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಸಾವನ್ನಪ್ಪಿದ್ದಾರೆ. ನಂತರ ಆರೋಪಿ ಬಿಳಿಕೆರೆ ಠಾಣೆಗೆ ಬಂದು ಶರಣಾಗಿದ್ದಾನೆ.