Mysore
27
few clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ರೈತ ದಸರಾ: ಕೃಷಿ ಸಂಸ್ಕೃತಿ ಅನಾವರಣಕ್ಕೆ ಸಿದ್ಧತೆ

ಅ.4ರಿಂದ ರ6ವರೆಗೆ ಪಸರಿಸಲಿದೆ ಗ್ರಾಮೀಣ ಸೊಗಡಿನ ಕಂಪು

ಮೈಸೂರು: ಬದಲಾದ ಕಾಲಕ್ಕೆ ತಕ್ಕಂತೆ ಕಡಿಮೆ ಖರ್ಚು, ಕಡಿಮೆ ನೀರು ಬಳಕೆ ಮಾಡಿಕೊಂಡು ಸಮಗ್ರ ಬೇಸಾಯ ಪದ್ಧತಿ, ಸುಧಾರಿತ ಹೈಟೆಕ್ ಯಂತ್ರೋಪಕರಣಗಳ ಪರಿಚಯ, ಹಾಲು ಕರೆಯುವ ಸ್ಪರ್ಧೆ, ಕೃಷಿ ವಸ್ತುಪ್ರದರ್ಶನ, ಮೀನು ಅಕ್ವೇರಿಯಂ, ಮುದ್ದು ಪ್ರಾಣಿಗಳ ಪ್ರದರ್ಶನ… ಇವಿಷ್ಟು ಈ ಬಾರಿಯ ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಆಯೋಜಿಸುವ ರೈತ ದಸರಾದ ಸದ್ಯದ ಕಾರ್ಯಕ್ರಮಗಳಾಗಿವೆ. ಅ. 4ರಿಂದ 6ರವರೆಗೆ ನಗರದ ರೈಲ್ವೆ ನಿಲ್ದಾಣದ ಬಳಿ ಇರುವ ಜೆ. ಕೆ. ಮೈದಾನದಲ್ಲಿ ನಡೆಯುವ ‘ರೈತ ದಸರಾ’ವನ್ನು ಈ ವರ್ಷ ವಿಭಿನ್ನ ರೀತಿಯಲ್ಲಿ ಆಯೋಜಿಸಲು ರೈತ ದಸರಾ ಉಪಸಮಿತಿ ಮುಂದಾಗಿದೆ.

ರೈತರಿಗೆ ಅನು ಕೂಲವಾಗುವ ಹಾಗೂ ಅಗತ್ಯ ಮಾಹಿತಿ ನೀಡಲು ಹಲವು ಕಾರ್ಯಕ್ರಮಗಳನ್ನು ಸಿದ್ಧಪಡಿಸಲಾಗಿದೆ. ಆ ಮೂಲಕ ಗ್ರಾಮೀಣ ಸೊಗಡು ಹಾಗೂ ಕೃಷಿ ಸಂಸ್ಕೃತಿ ಅನಾವರಣಗೊಳಿಸಲು ಉದ್ದೇಶಿಸಲಾಗಿದೆ. ಮುಖ್ಯವಾಗಿ ಇತ್ತೀಚೆಗೆ ರೈತರು ಅನುಭವಿಸುತ್ತಿ ರುವ ಕೃಷಿ ಕಾರ್ಮಿಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಈ ಬಾರಿಯ ರೈತ ದಸರಾ ಆಯೋಜನೆಗೊಳ್ಳಲಿದೆ. ಇತ್ತೀಚಿನ ದಿನಗಳಲ್ಲಿ ವ್ಯವಸಾಯ ಅತ್ಯಂತ ಶ್ರಮದ ಕೆಲಸ. ಇನ್ನೊಂದೆಡೆ ಕೃಷಿ ಕೂಲಿ ಕಾರ್ಮಿಕರ ಕೊರತೆಯಿಂದಾಗಿ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಹಾಗಾಗಿ, ರೈತರ ಅನುಕೂಲಕ್ಕಾಗಿ ಕಬ್ಬು ಕೊಯ್ಲು ಯಂತ್ರ, ಕಬ್ಬು ನಾಟಿ ಯಂತ್ರ, ಕೃಷಿ ಬೆಳೆಗಳ ಕೊಯ್ಲು, ಒಕ್ಕಣೆ ಯಂತ್ರಗಳೂ ಸೇರಿದಂತೆ ಸುಧಾರಿತ ಹೈಟೆಕ್ ಯಂತ್ರೋಪಕರಣಗಳನ್ನು ಪರಿಚಯಿಸಲು ಉಪ ಸಮಿತಿ ಮುಂದಾಗಿದೆ.

ಕಲಾ ತಂಡಗಳೊಂದಿಗೆ ಮೆರವಣಿಗೆ: ಅ. 4ರಂದು ಬೆಳಿಗ್ಗೆ 9 ಗಂಟೆಗೆ ನಗರದ ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಎದುರು ರೈತ ದಸರಾ ಮೆರವಣಿಗೆಗೆ ಚಾಲನೆ ಸಿಗಲಿದೆ. ಮೆರವಣಿಗೆಯಲ್ಲಿ ಸುಧಾರಿತ ಹೈಟೆಕ್ ಯಂತ್ರೋಪಕರಣಗಳ ಮೆರವಣಿಗೆ ನಡೆಯಲಿದೆ. ರೈತರಿಗೆ ಉಪಯೋಗವಾ ಗುವಂತ ಕೃಷಿ ಪರಿಕರಗಳ ಮೆರವಣಿಗೆ ನಡೆಯಲಿದೆ. ಮೆರವಣಿಗೆಯಲ್ಲಿ ರೈತ ದಸರಾ ಬಿಂಬಿಸುವ ಬ್ಯಾನರ್ ಗಳು, ನಾದಸ್ವರ, ಅಲಂಕೃತಗೊಂಡ ಎತ್ತಿನ ಗಾಡಿಗಳು, ಪೂಜಾ ಕುಣಿತ, ನಗಾರಿ, ಕೃಷಿ ಚಟುವಟಿಕೆಗಳನ್ನು ಬಿಂಬಿಸುವ ಚಿತ್ರಗಳು, ನಾನಾ ಕಲಾ ತಂಡಗಳು ಭಾಗಿಯಾಗುವ ನಿರೀಕ್ಷೆ ಇದೆ. ಮೆರವಣಿಗೆಯು ಕೆ. ಆರ್. ವೃತ್ತ, ಡಿ. ದೇವರಾಜ ಅರಸು ರಸ್ತೆ, ಎನ್. ಎಸ್. ರಸ್ತೆ ಮಾರ್ಗವಾಗಿ ಜೆ. ಕೆ. ಮೈದಾನವನ್ನು ತಲುಪಲಿದೆ. ಬಳಿಕ ರೈತ ದಸರಾ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.

ಪ್ರಾಣಿ ಪ್ರದರ್ಶನ, ಹಾಲು ಕರೆಯುವ ಸ್ಪರ್ಧೆಗಳು: ಪ್ರತಿ ವರ್ಷದಂತೆ ಈ ವರ್ಷವೂ ವಿಶೇಷವಾಗಿ ಮುದ್ದು ಪ್ರಾಣಿಗಳ ಪ್ರದರ್ಶನ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಅ. ೬ರಂದು ಮೈಸೂರು ವಿವಿ ಸ್ಪೋರ್ಟ್ಸ್ ಪೆವಿಲಿಯನ್ ಮೈದಾನದಲ್ಲಿ ಸ್ಪರ್ಧೆ ನಡೆಯಲಿದೆ. ನಾಯಿ, ಬೆಕ್ಕು ಹಾಗೂ ಕುರಿಗಳನ್ನು ಪ್ರದರ್ಶಿಸುವ ಮೂಲಕ ಆಕರ್ಷಕ ಬಹುಮಾನ ಪಡೆಯಬಹುದಾಗಿದೆ. ಅ. 5ರಂದು ಜೆ. ಕೆ. ಮೈದಾನದಲ್ಲಿ ಹಾಲು ಕರೆಯುವ ಸ್ಪರ್ಧೆ ನಡೆಯಲಿದ್ದು, ಬೆಳಿಗ್ಗೆ ಮತ್ತು ಸಂಜೆ ಒಂದು ಹಸು ಎಷ್ಟು ಹಾಲು ಕೊಡುತ್ತದೆ ಎನ್ನುವುದನ್ನು ಆಧರಿಸಿ ವಿಜೇತರನ್ನು ನಿರ್ಧರಿಸಲಾಗುತ್ತದೆ. ಹೆಚ್ಚು ಹಾಲು ಕರೆಯುವ ಹಸುವಿನ ಮಾಲೀಕರಿಗೆ ಅಂದು ಸಂಜೆಯೇ ಬಹುಮಾನ ನೀಡಲಾಗುತ್ತದೆ.

ಈ ಬಾರಿ ರೈತ ಕ್ರೀಡಾಕೂಟ ಇಲ್ಲ: ಪ್ರತಿ ವರ್ಷ ರೈತ ದಸರಾದಲ್ಲಿ ರೈತರಿಗೆ ನಾನಾ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿತ್ತು. ಈ ಬಾರಿ ಕ್ರೀಡಾಕೂಟವನ್ನು ಕೈಬಿಡಲಾಗಿದೆ. ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ತಾಲ್ಲೂಕು ಮಟ್ಟದ ರೈತ ಕ್ರೀಡಾಕೂಟಗಳು ನಡೆಯುತ್ತಿದ್ದವು. ಅಲ್ಲಿ ವಿಜೇತರಾದ ಸ್ಪರ್ಧಾಳುಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗುತ್ತಿದ್ದರು. ಜಿಲ್ಲಾ ಮಟ್ಟದ ಕ್ರೀಡಾಕೂಟ ಓವೆಲ್ ಮೈದಾನದಲ್ಲಿ ನಡೆಯುತ್ತಿತ್ತು. ರೈತರು ಮತ್ತು ರೈತ ಮಹಿಳೆಯರಿಗೆ ಪ್ರತ್ಯೇಕ ಸ್ಪರ್ಧೆಗಳು ನಡೆಯಲಿವೆ.

15ರಿಂದ 20 ಮಂದಿ ಪ್ರಗತಿಪರ ರೈತರಿಗೆ ಸನ್ಮಾನ: ಈ ಬಾರಿ ಯುವ ಹಾಗೂ ಸಾಧಕ ರೈತರು ಸೇರಿ ದಂತೆ ಜಿಲ್ಲೆಯ ಎಲ್ಲ ತಾಲ್ಲೂಕುಗಳ ಪ್ರಗತಿಪರ ಕೃಷಿ ಕರನ್ನು ಸನ್ಮಾನಿಸಲು ಚಿಂತಿಸಲಾಗಿದೆ. ಸಮಗ್ರ ಕೃಷಿ ಪದ್ಧತಿಯಿಂದ ಸ್ವಾವಲಂಬನೆ ಹಾಗೂ ಸುಧಾರಿತ ಹೈಟೆಕ್ ಯಂತ್ರೋ ಪಕರಣಗಳ ಬಳಕೆ ಕುರಿತು ವಿಚಾರ ವಿನಿಮಯ, ಕೃಷಿಯಲ್ಲಿ ಖುಷಿ ಕಂಡ ರೈತರಿಂದ ಅನುಭವ ಹಂಚಿಕೆ ಕಾರ್ಯಕ್ರಮ ಆಯೋಜಿಸಲು ಚಿಂತಿಸಲಾಗಿದೆ.

ಕೃಷಿ ವಸ್ತುಪ್ರದರ್ಶನಕ್ಕೆ ಅಗತ್ಯ ಸಿದ್ಧತೆ: ಜೆ. ಕೆ. ಮೈದಾನದಲ್ಲಿ ಕೃಷಿ ವಸ್ತುಪ್ರದರ್ಶನಕ್ಕೆ ಸಿದ್ಧತೆ ನಡೆದಿದ್ದು, ಕೃಷಿ, ರೇಷ್ಮೆ, ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ ಇಲಾಖೆ ಸೇರಿದಂತೆ ಕೃಷಿಗೆ ಸಂಬಂಧಿಸಿದ ಇಲಾಖೆಗಳ ಹೊಸ ಕಾರ್ಯಕ್ರಮಗಳು, ಪ್ರಗತಿ ಮತ್ತು ಮಾಹಿತಿ ನೀಡುವ ಪ್ರದರ್ಶನ ರೈತ ದಸರಾಗೆ ಕಳೆ ತರಲಿವೆ. ಅ. ೪ರಿಂದ ೬ರವರೆಗೆ ಮೈಸೂರಿನಲ್ಲಿ ಜೆ. ಕೆ. ಮೈದಾನದಲ್ಲಿ ‘ರೈತ ದಸರಾ’ವನ್ನು ಈ ಭಾರಿ ವಿಭಿನ್ನ ರೀತಿಯಲ್ಲಿ ಆಯೋಜಿಸಲಾಗು ತ್ತದೆ. ರೈತರ ಅನುಕೂಲಕ್ಕಾಗಿ ಸುಧಾರಿತ ಹೈಟೆಕ್ ಯಂತ್ರೋಪಕರಣಗಳ ಪರಿಚಯ ಮಾಡುವ ಕೆಲಸ ನಡೆಯಲಿದೆ. -ಕೃಷ್ಣರಾಜು, ಉಪ ವಿಶೇಷಾಧಿಕಾರಿ, ರೈತ ದಸರಾ ಉಪ ಸಮಿತಿ.

 

 

 

 

Tags: