ಮಡಿಕೇರಿ: ಜಿಲ್ಲೆಯ ಬೋಯಿಕೇರಿ ಗ್ರಾಮದಲ್ಲಿ ಗಣೇಶ ವಿಸರ್ಜನೆ ಹಿನ್ನೆಲೆ ಗ್ರಾಮದ ಮುಸ್ಲಿಂ ಬಾಂಧವರು ಸೌಹರ್ದತೆ ಮೆರೆದಿದ್ದಾರೆ.
ಮಡಿಕೇರಿ ಮೈಸೂರು ರಾಷ್ಟ್ರೀಯ ಹೆದ್ದಾರಿ275 ರಲ್ಲಿ ಹಾದು ಹೋಗುವಾಗ ಕಾಣಸಿಗುವ ಬೋಯಿಕೇರಿ ಗ್ರಾಮದಲ್ಲಿ ಗಣೇಶೋತ್ಸವದ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆ ಸ್ಥಳೀಯ ಜುಮಾ ಮಸೀದಿಯ ಮುಂಭಾಗಲ್ಲಿ ಸಿಹಿ ತಿನಿಸುಗಳು ಮತ್ತು ತಂಪು ಪಾನೀಯ ನೀಡಿ ಮುಸ್ಲಿಂಮರು ಸೌಹಾರ್ದತೆ ಮೆರೆದಿದ್ದಾರೆ.