Mysore
28
overcast clouds

Social Media

ಗುರುವಾರ, 18 ಡಿಸೆಂಬರ್ 2025
Light
Dark

ಕಿಚ್ಚು ಹಚ್ಚಿದ್ರಾ ಕಿಚ್ಚ….

ಬೆಂಗ‌ಳೂರು: ಸದ್ಯ ನಟ ಕಿಚ್ಚ ಸುದೀಪ್‌ 51ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇನ್ನು ಅವರು ಜಯನಗರ ಎಂಇಎಸ್‌ ಮೈದಾನದಲ್ಲಿ ಕಾರ್ಯಕ್ರಮ ನಡೆಸಿ, ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ಈ ವೇಳೆ ಮಾತನಾಡಿದ ಕಿಚ್ಚ ಸುದೀಪ್‌, ನಾನು ಸಂಪಾದನೆ ಮಾಡಿರುವ ಅಭಿಮಾನಿಗಳು ನನ್ನ ಹೆಸರಿಗೆ ಕಳಂಕ ತರುವಂತಹ ಯಾವ ಕೆಲಸವನು ಮಾಡಿಲ್ಲ, ಮುಂದೆಯೋ ಮಾಡಲ್ಲ. ನಾನು ಕೂಡ ಮಾಡಲ್ಲ. ಇದು ಸಮಾಜಕ್ಕೆ ತುಂಬಾನೇ ಮುಖ್ಯ ಆಗುತ್ತದೆ ಎಂದು ಹೇಳಿದ್ದಾರೆ.

ಸಿನಿಮಾ ಎಲ್ಲಾರೂ ಮಾಡುತ್ತಾರೆ. ದೊಡ್ಡ ದೊಡ್ಡ ಕಲಾವಿದರೂ ಇದ್ದಾರೆ. ಅವರು ಒಳ್ಳೊಳ್ಳೆ ಸಿನಿಮಾ ಕೊಡುತ್ತಾರೆ, ಯಶಸ್ಸು ಕಾಣುತ್ತಾರೆ ಎಂದರು.

ಇನ್ನು ವ್ಯಕ್ತಿತ್ವದಲ್ಲಿ ದೊಡ್ಡವರಾಗಬೇಕು ಎಂದರೆ ಬರೀ ಸಿನಿಮಾ ಮಾಡಿದರೆ ಸಾಕಾಗುವುದಿಲ್ಲ. ಕುಟುಂಬ, ಸ್ನೇಹಿತರು, ಅಭಿಮಾನಿಗಳು ನನ್ನೊಂದಿಗೆ ಚೆನ್ನಾಗಿದ್ದಾರೆ. ಅಲ್ಲದೆ, ನಾನು ತಪ್ಪಿ ನಡೆದಾನ ಮಾಧ್ಯಮ ಮಿತ್ರರು ತಿದ್ದಿದ್ದಾರೆ. ಇವರೆಲ್ಲ ನನ್ನ ಜೀವನದಲ್ಲಿ ಚೆನ್ನಾಗಿದ್ದಾರೆ. ಆದ್ರಿಂದ ಇವತ್ತು ನಾನು ಕೂಡ ಚೆನ್ನಾಗಿ ಬೆಳೆದಿದ್ದೇನೆ ಎಂದು ಕಿಚ್ಚ ಸುದೀಪ್‌ ಹೇಳಿದರು.

ಇನ್ನೂ ತಮ್ಮ ಮಾತಿನುದ್ದಕ್ಕೂ ನನ್ನ ಫ್ಯಾನ್ಸ್‌ ಫ್ಯಾನ್ಸ್‌ ಎಂದು ನಟ ದರ್ಶನ್‌ರನ್ನು ಕಾಲೆಳೆದರ? ಜೊತೆಗೆ ದಾಸನ ಅಭಿಮಾನಿಗಳಿಗೆ ನೀತಿಪಾಠ ಮಾಡಿದ್ರಾ? ಅನ್ನೋ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿದೆ.

Tags:
error: Content is protected !!