ಉಡುಪಿ: ಟಾಲಿವುಡ್ ಸ್ಟಾರ್ ಜೂನಿಯರ್ ಎನ್‌ಟಿಆರ್ ಅವರು ಕುಂದಾಪುರದ ಕೆರಾಡಿ ಗ್ರಾಮದಲ್ಲಿರುವ ಮೂಡುಕಲ್ಲು ಕೇಶವನಾಥೇಶ್ವರ ಗುಹಾಂತರ ದೇವಸ್ಥಾನಕ್ಕೆ ಭೇಟಿ ನೀಡಿ, ಅಮ್ಮನ ಆಸೆ ತೀರಿಸಿದ್ದಾರೆ.
ಕರಾವಳಿಯ ಸಸ್ಯಕಾಶಿ, ಬೆಟ್ಟ-ಗುಡ್ಡಗಳು ಸೇರಿದಂತೆ ನದಿ-ತೊರೆಗಳಿಗೆ ನೋಡಿ ಮನಸೋತಿರುವ ಜೂನಿಯರ್ ಎನ್‌ಟಿಆರ್ ಅವರು, ಎರಡು ದಿನಗಳ ಕಾಲ ಉಡುಪಿಯ ದೇವಸ್ಥಾನಗಳೀಗೆ ಭೇಟಿಕೊಟ್ಟು ಗೆಳೆಯರ ಜೊತೆ ಸುತ್ತಾಡುತ್ತಿದ್ದಾರೆ.
ಉಡುಪಿ ಜಿಲ್ಲೆಯ ಪ್ರವಾಸದಲ್ಲಿರುವ ಜೂನಿಯರ್ ಎನ್‌ಟಿಆರ್ ಅವರು, ಕೃಷ್ಣಮಠ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸಿದ್ದರು. ಇದೀಗ ಅಮ್ಮನ ಆಸೆ ಈಡೇರಿಸಲು ಕುಂದಾಪುರದ ಕೆರಾಡಿ ಗ್ರಾಮದ ಮೂಡುಗಲ್ಲು ಕೇಶವನಾಥೇಶ್ವರ ಗುಹಾಂತರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ಕೆರಾಡಿ, ನಟ ರಿಷಬ್ ಶೆಟ್ಟಿ ಊರಾಗಿದ್ದು, ಅಲ್ಲಿಗೆ ಜೂನಿಯರ್ ಎನ್‌ಟಿಆರ್ ಭೇಟಿ ನೀಡಿದ್ದು ವಿಶೇಷವೆನಿಸಿತ್ತು. ಈ ವೇಳೆ ನಟ ರಿಷಬ್ ಶೆಟ್ಟಿ, ನಿರ್ದೇಶಕ ಪ್ರಶಾಂತ್ ನೀಲ್ ಸೇರಿದಂತೆ ಹಲವರು ಕೂಡ ದೇಗುಲಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದರು.