Mysore
24
haze

Social Media

ಶನಿವಾರ, 03 ಜನವರಿ 2026
Light
Dark

ನಾಪತ್ತೆಯಾಗಿದ್ದ ರಷ್ಯಾದ ಹೆಲಿಕಾಪ್ಟರ್‌ ಪತನ: 22 ಮಂದಿ ಸಾವು

ಮಾಸ್ಕೋ: ನಾಪತ್ತೆಯಾಗಿದ್ದ ರಷ್ಯಾದ ಎಂಐ-8ಟಿ ಹೆಲಿಕಾಪ್ಟರ್‌ ಕಮ್ಚಟ್ಕಾದ ಪೂರ್ವ ಪರ್ಯಾಯ ದ್ವೀಪದ ಬಳಿ ಪತ್ತೆಯಾಗಿದೆ. ಹೆಲಿಕಾಪ್ಟರ್‌ನಲ್ಲಿದ್ದ 22 ಮಂದಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

22 ಜನರನ್ನು ಹೊತ್ತ ರಷ್ಯಾದ ಎಂಐ-8ಟಿ ಹೆಲಿಕಾಪ್ಟರ್‌ ವಚ್ಚಜೆಟ್ಸ್‌ ವಾಲ್ಕೆನೊ ಎಂಬಲ್ಲಿಂದ ಹೊರಟು ನಾಪತ್ತೆಯಾಗಿತ್ತು. ಇದಾದ ಒಂದು ತಿಂಗಳ ಬಳಿಕ ಕಮ್ಚಟ್ಕಾದ ಪೂರ್ವ ಪರ್ಯಾಯ ದ್ವೀಪದಲ್ಲಿ ಪತನಗೊಂಡಿರುವುದು ಗೊತ್ತಾಗಿದೆ.

ಅದಕ್ಕೆ ಪೂರಕವಾಗಿ ಹೆಲಿಕಾಪ್ಟರ್‌ನ ಅವಶೇಷಗಳು ಅಲ್ಲಿ ಸಿಕ್ಕಿದ್ದು, ಹೆಲಿಕಾಪ್ಟರ್‌ನಲ್ಲಿದ್ದ 22 ಮಂದಿಯೂ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಮಾಸ್ಕೋದಿಂದ ಸುಮಾರು 7,100 ಕಿ.ಮೀ ಕಮ್ಚಟ್ಕಾದ ಪೂರ್ವ ಪರ್ಯಾಯ ದ್ವೀಪದಲ್ಲಿ ವಾರಾದ್ಯಂತದಲ್ಲಿ ಮಳೆ, ಗಾಳಿಯೊಂದಿಗೆ ಚಂಡಮಾರುತ ಹೆಚ್ಚಾಗಿತ್ತು. ಈ ಕಾರಣದಿಂದಾಗಿ ದುರಂತ ಸಂಭವಿಸಿದೆ ಎಂದು ಪ್ರಾಥಮಿಕ ಮೂಲಗಳಿಂದ ತಿಳಿದು ಬಂದಿದೆ.

 

Tags:
error: Content is protected !!