ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆಪ್ಟೆಂಬರ್ 2 ಹಾಗೂ 3 ರಂದು ಮೈಸೂರು ಪ್ರವಾಸದಲ್ಲಿರಲಿದ್ದಾರೆ. ಸಿಎಂ ಅವರಿಗೆ ನಾಳೆ (ಸೆಪ್ಟಂಬರ್ 2) ಮುಡಾ ವಿಚಾರಣೆ ಇರುವುದರಿಂದ ತಮ್ಮ ಎಲ್ಲಾ ಕೆಲಸಗಳನ್ನು ಮುಂದಕ್ಕೆ ಹಾಕಲಾಗಿದ್ದು, ನಾಳೆ ವಿಚಾರಣೆ ಮುಗಿದ ಬಳಿಕ ಸೆಪ್ಟೆಂಬರ್ 2ರಂದು ರಾತ್ರಿ 7,25 ಕ್ಕೆ ಮೈಸೂರು ನಗರಕ್ಕಾಗಮಿಸುವ ಅವರು ಮೈಸೂರಿನಲ್ಲಿ ವಾಸ್ತವ್ಯ ಇರಲಿದ್ದಾರೆ.
ಸೆಪ್ಟೆಂಬರ್ 3 ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯಲಿದ್ದಾರೆ.
ನಂತರ ಬೆಳಿಗ್ಗೆ 10,30ಕ್ಕೆ ಚಾಮುಂಡಿ ಬೆಟ್ಟದ ದಾಸೋಹ ಭವನದಲ್ಲಿ ನಡೆಯಲಿರುವ ಚಾಮುಂಡಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಭಾಗವಹಿಸಿ, ಮಧ್ಯಾಹ್ನ 2 ಗಂಟೆಗೆ ಬೆಂಗಳೂರಿಗೆ ತೆರಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.