Mysore
27
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಈ ಬಾರಿ ಪರಿಸರ ಸ್ನೇಹಿ ಗಣಪನಿಗೆ ಭಾರೀ ಬೇಡಿಕೆ

ಮೈಸೂರು: ಗೌರಿ ಗಣೇಶ ಹಬ್ಬಕ್ಕೆ ಇನ್ನು ಆರು ದಿನಗಳು ಬಾಕಿಯಿದ್ದು, ಪರಿಸರ ಸ್ನೇಹಿ ಗಣಪನ ಮೂರ್ತಿಗಳ ತಯಾರಿ ಭರದಿಂದ ಸಾಗಿದೆ.

ಯುವಕರು ಅಂದ ಚೆಂದದಿಂದ ಕಂಗೊಳಿಸುವ ಗೌರಿ ಸುತನನ್ನು ಪ್ರತಿಷ್ಠಾಪಿಸಲು ಮುಂಗಡ ಕಾಯ್ದಿರಿಸುವತ್ತ ಚಿತ್ತ ಹರಿಸುತ್ತಿದ್ದು, ಈ ಬಾರಿ ಪರಿಸರ ಸ್ನೇಹಿ ಗಣಪನಿಗೆ ಭಾರೀ ಬೇಡಿಕೆ ಹೆಚ್ಚಾಗಿದೆ.

ಮಾರುಕಟ್ಟೆಯಲ್ಲಂತೂ ಮಣ್ಣಿನ ಗಣೇಶ ಮೂರ್ತಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಯುವಕರು ಹಬ್ಬದ ದಿನದಂದು ಮಣ್ಣಿನ ಗಣಪನನ್ನೇ ಕೂರಿಸಲು ಕಾತುರರಾಗಿದ್ದಾರೆ.

ಈ ಬಾರಿ ಪರಿಸರ ಸ್ನೇಹಿ ಮಣ್ಣಿನ ಗಣೇಶನ ಮಾರಾಟಕ್ಕೆ ಮಾತ್ರ ಜಿಲ್ಲಾಡಳಿತ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಬೃಹತ್‌ ಗಾತ್ರದ ಮಣ್ಣಿನ ಗಣಪನನ್ನು ಕೂಡ ತಯಾರು ಮಾಡಲಾಗಿದೆ.

ಇನ್ನು ಜಲಮೂಲಗಳ ರಕ್ಷಣೆ ಹಾಗೂ ಸಾರ್ವಜನಿಕರ ಆರೋಗ್ಯ ಹಾಗೂ ಸುರಕ್ಷತೆಯ ಹಿತದೃಷ್ಟಿಯಿಂದ ನಿಸರ್ಗ ಸ್ನೇಹಿ ಹಾಗೂ ಮಣ್ಣಿನ ಮೂರ್ತಿಗಳನ್ನು ಮಾತ್ರ ಮಾರಾಟ ಮಾಡಲು ಜಿಲ್ಲಾಡಳಿತ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಮುಖ್ಯವಾಗಿ ಯುವಕರು ಪಿಒಪಿ ಗಣಪನನ್ನು ಕೂರಿಸುವ ಯೋಜನೆ ಕೈಬಿಟ್ಟಿದ್ದು, ಪರಿಸರ ಸ್ನೇಹಿ ಗಣಪನನ್ನೇ ಕೂರಿಸಿ ಅದ್ಧೂರಿಯಾಗಿ ಹಬ್ಬ ಮಾಡಲು ಕಾತುರರಾಗಿದ್ದಾರೆ.

 

Tags: