Mysore
16
clear sky

Social Media

ಶುಕ್ರವಾರ, 30 ಜನವರಿ 2026
Light
Dark

ಸಿದ್ದರಾಮಯ್ಯ ಅನುಮತಿ ಕೊಟ್ಟರೇ ನಾನು ಸಿಎಂ ಆಗುತ್ತೇನೆ: ಆರ್‌.ವಿ ದೇಶಪಾಂಡೆ

ಮೈಸೂರು: ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಮೇಲೆ ರಾಜ್ಯಪಾಲರಿಂದ ಪ್ರಾಷಿಕ್ಯೂಷನ್‌ ಹೊರಿಡಿಸಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸಿಎಂ ಬದಲಾವಣೆ ಬಿರುಗಾಳಿ ಜೋರಾಗಿದೆ.

ಸಿಎಂ ಗಾದಿಗೆಗಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌, ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಬಳಿಕ ಕಾಂಗ್ರೆಸ್‌ ಪಾಳಯದಲ್ಲಿ ಮತ್ತೊಬ್ಬ ನಾಯಕ ತಾವು ಸಿಎಂ ಆಗುವುದಾಗಿ ಹೆಬ್ಬಯಕೆಯನ್ನು ಹೊರಹಕಿದ್ದಾರೆ.

ಈ ಕುರಿತು ಮೈಸೂರಿನಲ್ಲಿಂದು (ಸೆ.೧) ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಚಿವ ಆರ್‌.ವಿ ದೇಶಪಾಂಡೆ, ಸಿಎಂ ಆಗಿರುವ ಸಿದ್ದರಾಮಯ್ಯ ಅವರು ಅನುಮತಿ ನೀಡಿದರೇ ನಾನು ಸಿಎಂ ಆಗುತ್ತೇನೆ ಎಂದು ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ಹಾಗೂ ನಾನು ಬಹು ಕಾಲದ ಗೆಳೆಯರು ಸಿದ್ದರಾಮಯ್ಯಗಿಂತ ನಾನು ವಯಸ್ಸಿನಲ್ಲಿ ಹಿರಿಯವನು. ರಾಜ್ಯದಲ್ಲಿ ಸಿಎಂ ಬದಲಾವಣೆಯ ಅಂತಹ ಚರ್ಚೆಯೂ ಇಲ್ಲ, ಪ್ರಶ್ನೆಯೂ ಇಲ್ಲ. ಜೀವನದಲ್ಲಿ ಮಹತ್ವಾಕಾಂಕ್ಷೆ ಇರಬೇಕು ಹಾಗಾಗಿ ಮಾತಿಗಾಗಿ ಹೇಳುತ್ತಿದ್ದೇನೆ ಎಂದರು.

ಇನ್ನು ಸಿಎಂ ಬದಲಾವಣೆ ವಿಚಾರ ಹೈಕಮಾಂಡ್‌ಗೆ ಸೇರಿದ್ದು, ಒಂದು ವೇಳೆ ಹೈಕಮಾಂಡ್‌ ಒಪ್ಪಿದರೂ ಸಿದ್ದರಾಮಯ್ಯ ಅನುಮತಿಸಬೇಕು. ಸಿದ್ದರಾಮಯ್ಯ ಒಪ್ಪಿದ್ದಲ್ಲಿ ನಾನು ಸಿಎಂ ಆಗುತ್ತೇನೆ ಎಂದು ಆರ್‌.ವಿ ದೇಶಪಾಂಡೆ ಶಾಕಿಂಗ್‌ ಹೇಳಿಕೆ ನೀಡಿದ್ದಾರೆ.

Tags:
error: Content is protected !!