Mysore
26
scattered clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

US open 2024| ಜೊಕೊವಿಕ್‌ಗೆ ಸೋಲು; ಈ ವರ್ಷ ಒಂದೂ ಗ್ರ್ಯಾಂಡ್‌ ಸ್ಲಾಮ್‌ ಗೆಲ್ಲದ ಸರ್ಬಿಯಾ ಕಿಂಗ್‌

ನ್ಯೂಯಾರ್ಕ್‌: ಅಮೇರಿಕಾ ಓಪನ್‌ ಗ್ರಾಂಡ್‌ಸ್ಲಾಮ್‌ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ನ ಮೂರನೇ ಸುತ್ತಿನಲ್ಲಿ ಸರ್ಬಿಯಾದ ಲೆಜೆಂಡ್‌ ನೊವಾಕ್‌ ಜೊಕೊವಿಕ್‌ ಸೋಲು ಕಾಣುವ ಮೂಲಕ ಟೂರ್ನಿಯಿಂದ ಹೊರನಡೆದಿದ್ದಾರೆ.

ಆಸೀಸ್‌ ಆಟಗಾರ ಅಲೆಕ್ಸಿ ಪೊಪಿರಿನ್‌ ವಿರುದ್ಧ 6-4, 6-4, 2-6, 6-4 ಅಂತರದಿಂದ ಹೀನಾಯ ಸೋಲು ಕಾಣುವ ಮೂಲಕ ತಮ್ಮ ಅಭಿಯಾನವನ್ನು ಇಲ್ಲಿಗೆ ಮುಗಿಸಿದರು.

24 ಬಾರಿಯ ಗ್ರ್ಯಾಂಡ್‌ ಸ್ಲಾಮ್‌ ವಿನ್ನರ್‌ ಜೊಕೊವಿಕ್‌ ಅವರು 2017ರ ಬಳಿಕ ಇದೇ ಮೊದಲ ಬಾರಿಗೆ 2024ರಲ್ಲಿ ಒಂದೇ ಒಂದು ಗ್ರ್ಯಾಂಡ್‌ಸ್ಲಾಮ್‌ ಗೆಲ್ಲುವಲ್ಲಿ ಜೊಕೊವಿಕ್‌ ವಿಫಲರಾಗಿದ್ದಾರೆ.

37 ವರ್ಷದ ಜೊಕೊವಿಕ್‌ ಅವರು 2011, 2015, 2018 ಹಾಗೂ 2023 ರಲ್ಲಿ ಅಮೇರಿಕಾ ಓಪನ್‌ ಗ್ರ್ಯಾಂಡ್‌ಸ್ಲಾಮ್‌ ಕಿರೀಟ ಗೆದ್ದಿದ್ದರು. ಆದರೆ ಈ ಬಾರಿ ಪ್ರಶಸ್ತಿ ಗೆಲ್ಲುವಲ್ಲಿ ವಿಫಲರಾಗಿ ಟೂರ್ನಿಯಿಂದ ಹೊರ ನಡೆದರು.

ಅಮೇರಿಕಾ ಓಪನ್‌ನಲ್ಲಿ ಮೊದಲ ಸುತ್ತಿನಲ್ಲೇ ಸ್ಪೇನ್‌ನ ಆಲ್ಕರಾಜ್‌ ಸೋಲು ಕಂಡಿದ್ದರು. ಈಗ ಮತ್ತೊಂದು ಅಚ್ಚರಿಯ ಫಲಿತಾಂಶ ಬಂದಿದ್ದು, ಜೊಕೊವಿಕ್‌ ಕೂಡಾ ಟೂರ್ನಿಯಿಂದ ನಿರ್ಗಮಿಸಿದ್ದಾರೆ.

https://x.com/usopen/status/1829731427698499914

Tags: