ಪ್ಯಾರಿಸ್: ಇಲ್ಲಿ ನಡೆಯುತ್ತಿರುವ 2024ರ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಬೆಳ್ಳಿ ಸಂದಿದೆ.
10ಮೀ ಏರ್ ರೈಫಲ್ (ಎಸ್‌ಎಚ್-1) ನಲ್ಲಿ ಉತ್ತಮ ಪ್ರದರ್ಶನ ತೋರಿದ ಭಾರತದ ಶೂಟರ್ ಮನೀಶ ನರ್ವಾಲ್ ಅವರು ಬೆಳ್ಳಿ ಪದಕ ಗೆದ್ದು ಬೀಗಿದರು. ಆ ಮೂಲಕ ಭಾರತಕ್ಕೆ ಒಂದೇ ದಿನದಲ್ಲಿ ನಾಲ್ಕು ಪದಕಗಳು ಬಂದಿವೆ.
ಮನೀಶ್ ನರ್ವಾಲ್ 10ಮೀ ಏರ್ ರೈಫಲ್‌ನಲ್ಲಿ ಫೈನಲ್ಸ್‌ನಲ್ಲಿ ಅವರು ಒಟ್ಟು 24 ಸುತ್ತುಗಳಲ್ಲಿ ಒಟ್ಟಾರೆಯಾಗಿ 234.9 ಅಂಕ ಗಳಿಸುವ ಮೂಲಕ ಬೆಳ್ಳಿ ಪದಕ ಜಯಿಸಿದರು. ಆ ಮೂಲಕ ಇಂದು ಒಂದೇ ದಿನ ಭಾರತಕ್ಕೆ ನಾಲ್ಕು ಪದಕಗಳು ಬಂದಿದೆ. ಶೂಟಿಂಗ್‌ನಲ್ಲಿ ಒಂದರಲ್ಲೇ ಒಟ್ಟು ಮೂರು ಪದಕಗಳು (ಒಂದು ಚಿನ್ನ, ಬೆಳ್ಳಿ ಹಾಗೂ ಕಂಚು) ಬಂದಿದೆ.
ದಕ್ಷಿಣ ಕೊರಿಯಾದ ಜಿಯೋಂಗ್ಡು ಜೋ ಅವರು 237.4 ಅಂಕ ಗಳಿಸಿ ಚಿನ್ನ ಗೆದ್ದರು. ಭಾರತದ ನರ್ವಾಲ್ 234.9 ಅಂಕದೊಂದಿಗೆ ಬೆಳ್ಳಿ ಗೆದ್ದರೇ, ಚೀನಾದಾ ಚಾವೊ ಯಾಂಗ್ ಅವರು ಕಂಚಿನ ಪದಕ ಗೆದ್ದರು.
ಕಳೆದ ಟೋಕಿಯೋ ಒಲಂಪಿಕ್ಸ್‌ನಲ್ಲಿ ಮನೀಶ್ ನರ್ವಾಲ್ ಅವರು 234.9 ಅಂಕದೊಂದಿಗೆ ಚಿನ್ನ ಗೆದ್ದಿದ್ದರು. ಇಂದು ಬೆಳ್ಳಿ ಗೆದ್ದಿದ್ದಾರೆ.