Mysore
24
scattered clouds

Social Media

ಬುಧವಾರ, 15 ಜನವರಿ 2025
Light
Dark

ಬುಲ್ಡೋಜರ್‌ ನ್ಯಾಯ ಅನಾಗರಿಕತೆ: ಪ್ರಿಯಾಂಕಾ ಗಾಂಧಿ ವಾಗ್ದಾಳಿ

ನವದೆಹಲಿ: ಪ್ರತಿ ವಿಷಯದಲ್ಲೂ ಆರೋಪಿಗಳ ಮನೆಗಳನ್ನು ಬುಲ್ಡೋಜರ್‌ ಮೂಲಕ ಹೊಡೆದು ಹಾಕುವ ಪ್ರವೃತ್ತಿ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಕೊನೆಗೊಳ್ಳುತ್ತಿಲ್ಲ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಕಿಡಿಕಾರಿದ್ದಾರೆ.

ಮಧ್ಯಪ್ರದೇಶದ ಛತ್ತರ್‌ಪುರ ಘಟನೆಯ ನಂತರ, ಬುಲ್ಡೋಜರ್‌ ನ್ಯಾಯ ವಿರುದ್ಧ ಕಾಂಗ್ರೆಸ್‌ ಕಿಡಿಕಾರಿದೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಪ್ರಿಯಾಂಕಾ ಗಾಂಧಿ ಇದು ನ್ಯಾಯವಲ್ಲ. ಅನಾಗರಿಕತೆಯ ಪರಮಾವಧಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಯಾವುದೇ ಅಪರಾಧದ ಆರೋಪಿಯಾಗಿದ್ದರೆ, ಆತನ ಅಪರಾಧ ಹಾಗೂ ಶಿಕ್ಷೆಯನ್ನು ನ್ಯಾಯಾಲಯ ನಿರ್ಧಾರ ಮಾಡುತ್ತದೆ. ಆದರೆ ಆರೋಪ ಬಂದ ತಕ್ಷಣ ಆರೋಪಿಗಳ ಕುಟಂಬಕ್ಕೆ ಶಿಕ್ಷೆ ವಿಧಿಸುವುದು ಸರಿಯಲ್ಲ. ಇದು ಅನಾಗರಿಕತೆ ಮತ್ತು ಅನ್ಯಾಯದ ಪರಮಾವಧಿ ಎಂದು ಪ್ರಿಯಾಂಕಾ ಗಾಂಧಿ ಟ್ವೀಟ್‌ ಮಾಡಿ ಕಿಡಿಕಾರಿದ್ದಾರೆ.

ಇನ್ನು ಎರಡು ದಿನಗಳ ಹಿಂದೆ ಛತ್ತರ್‌ಪುರ ಪೊಲೀಸ್‌ ಠಾಣೆ ಮೇಲೆ ಕಲ್ಲು ತೂರಾಟ ನಡೆದಿದ್ದು, ಕೆಲ ಪೊಲೀಸರು ಗಾಯಗೊಂಡಿದ್ದರು. ಇದರಿಂದ ರೊಚ್ಚಿಗೆದ್ದ ಪೊಲೀಸರು ಮರುದಿನವೇ ಆರೋಪಿಯೊಬ್ಬನ ಮನೆಯನ್ನು ಕೆಡವಿದರು. ಅಷ್ಟೇ ಅಲ್ಲದೇ ಮೂರು ಐಷಾರಾಮಿ ಕಾರುಗಳನ್ನು ಸಹ ಬುಲ್ಡೋಜರ್‌ನಿಂದ ನಾಶಪಡಿಸಲಾಗಿದೆ.

Tags: