Mysore
27
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ರಾಜ್ಯಪಾಲ ವಿಜಯ್‌ ಶಂಕರ್‌ ಭೇಟಿಯಾದ ಸಂಸದ ಯದುವೀರ್‌ ಒಡೆಯರ್‌

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರಿಂದು (ಆ.24) ಮೇಘಾಲಯದ ನೂತನ ರಾಜ್ಯಪಾಲರಾದ ಸಿ.ಎಚ್.ವಿಜಯ್‌ಶಂಕರ್ ಅವರನ್ನು ಭೇಟಿಯಾಗಿ ಅಭಿನಂದಿಸಿದರು.

ಈ ಸಂಬಂಧ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಫೋಟೋ ಒಂದನ್ನು ಹಂಚಿಕೊಂಡಿರುವ ಯದುವೀರ್‌ ಅವರು, “ಮೇಘಾಲಯದ ನೂತನ ಗೌರವಾನ್ವಿತ ರಾಜ್ಯಪಾಲರಾದ ಸಿ.ಎಚ್.ವಿಜಯ್‌ಶಂಕರ್ ಅವರನ್ನು ಇಂದು ಅಭಿನಂದಿಸಲಾಯಿತು. ಅವರ ಸಮರ್ಥ ಆಡಳಿತ ವೈಖರಿ, ಅನುಭವಿ ರಾಜಕಾರಣ ಮತ್ತು ಅಪಾರ ಅನುಭವವು ಮೇಘಾಲಯದ ರಾಜ್ಯಪಾಲರ ಕಚೇರಿಗೆ ಮಹತ್ತರವಾಗಿ ಕೊಡುಗೆಯನ್ನು ನೀಡುತ್ತದೆ. ತಾಯಿ ಚಾಮುಂಡೇಶ್ವರಿ ದೇವಿಯು ಅವರಿಗೆ ಉತ್ತಮ ಆರೋಗ್ಯ ಮತ್ತು ಸಮೃದ್ಧಿಯನ್ನು ಕರುಣಿಸಲಿ ಎಂದು ಶುಭಹಾರೈಸಲಾಯಿತು” ಎಂದು ಬರೆದುಕೊಂಡಿದ್ದಾರೆ.

Tags: