Mysore
18
mist

Social Media

ಮಂಗಳವಾರ, 23 ಡಿಸೆಂಬರ್ 2025
Light
Dark

ಅನಿಲ್‌ ಅಂಬಾನಿಗೆ ಸೆಬಿ ಶಾಕ್:‌ ಷೇರು ಮಾರುಕಟ್ಟೆಯಿಂದ 5 ವರ್ಷ ಬ್ಯಾನ್, 25 ಕೋಟಿ ದಂಡ

ಮುಂಬೈ: ಕೈಗಾರಿಕೋದ್ಯಮಿ ಅನಿಲ್‌ ಅಂಬಾನಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಆರ್‌ಎಚ್‌ಎಫ್‌ಎಲ್‌ ಹಣ ದುರುಪಯೋಗ ಪ್ರಕರಣದಲ್ಲಿ ಐದು ವರ್ಷ ಕಾಲ ಷೇರು ಮಾರುಕಟ್ಟೆಯಿಂದ ಅವರನ್ನು ನಿಷೇಧಿಸಲಾಗಿದೆ.

ಮಾರುಕಟ್ಟೆ ನಿಯಂತ್ರಕ ಸೆಬಿಯು ಈ ನಿರ್ಣಯ ಕೈಗೊಂಡಿದ್ದು, ನಿಷೇಧದ ಜೊತೆಗೆ 25 ಕೋಟೆ ದಂಡವನ್ನು ಸಹ ವಿಧಿಸಿದೆ. ಇನ್ನೂ ಇತರ ಅಧಿಕಾರಿಗಳಿಗೂ ಕೂಡ ಆರ್‌ಎಚ್‌ಎಫ್‌ಎಲ್‌ ಪ್ರಕರಣದಲ್ಲಿ ದಂಡ ವಿಧಿಸಿದೆ.

ರಿಲಯನ್ಸ್‌ ಹೋಮ್‌ ಫೈನಾನ್ಸ್‌ನ ಮಾಜಿ ಅಧ್ಯಕ್ಷ ಅನಿಲ್‌ ಅಂಬಾನಿ ಸೇರಿದಂತೆ ಒಟ್ಟು 24 ಉದ್ಯಮಿಗಳನ್ನು ಷೇರುಮಾರುಕಟ್ಟೆಯಿಂದ ನಿಷೇಧ ಮಾಡಲಾಗಿದೆ. ಅಲ್ಲದೇ ರಿಲಯನ್ಸ್‌ ಹೋಮ್‌ ಫೈನಾನ್ಸ್ ಅನ್ನು ಆರು ತಿಂಗಳ ಕಾಲ ನಿಷೇಧಿಸಲಾಗಿದ್ದು, ದಂಡವನ್ನು ಸಹ ವಿಧಿಸಲಾಗಿದೆ.

ಅನಿಲ್‌ ಅಂಬಾನಿ ಆರ್‌ಎಫ್‌ಎಫ್‌ಎಲ್‌ನ ಪ್ರಮುಖ ವ್ಯವಸ್ಥಾಪಕ ಸಿಬ್ಬಂದಿಗಳ ನೆರವಿನೊಂದಿಗೆ, ತನಗೆ ಸಂಬಂಧಿಸಿದ ಸಂಸ್ಥೆಗಳಿಗೆ ಸಾಲದ ನೆಪದಲ್ಲಿ ನೀಡಿರುವ ಹಣದಲ್ಲಿ ವಂಚಿಸಿದ್ದಾರೆ ಎಂದು ಸೆಬಿಯ ತನಿಖೆಯಿಂದ ತಿಳಿದು ಬಂದಿದೆ. ಈ ಕುರಿತು ಸೆಬಿಯು 222 ಪುಟಗಳ ಆದೇಶದಲ್ಲಿ ಅವ್ಯವಹಾರಗಳನ್ನು ವಿವರಿಸಿದೆ ಎಂದು ತಿಳಿದು ಬಂದಿದೆ.

ರಿಲಯನ್ಸ್‌ ಹೋಮ್‌ ಫೈನಾನ್ಸ್‌ ಸಂಸ್ಥೆವು ಸಾವಿರಾರು ಕೋಟಿ ರೂಪಾಯಿಗಳನ್ನ ಯಾವುದೇ ಅಡಮಾನ ಅಥವಾ ಸೆಕ್ಯೂರಿಟಿಯನ್ನಾಗಲೀ ಪಡೆಯದೆ ಜೊತೆಗ ಸಾಲ ತೀರಿಸಲು ಯಾವುದೇ ಪ್ರಮುಖ ಆದಾಯ ಇಲ್ಲದ ಸಣ್ಣ ಪುಟ್ಟ ಸಂಸ್ಥೆಗಳಿಗೂ ಕೂಡ ನಿಯಮ ಬಾಯಿರವಾಗಿ ಸಾಲ ಮಂಜೂರು ಮಾಡಲಾಗಿತ್ತು.

ಈ ವಹಿವಾಟಿನ ಹಿಂದಿನ ಉದ್ದೇಶಗಳ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿದ್ದು, ಆರ್‌ಎಚ್‌ಎಫ್‌ಎಲ್‌ ಗ್ರೂಪ್‌ ಮುಖ್ಯಸ್ಥರಾದ ಅನಿಲ್‌ ಅಂಬಾನಿ ನೇರವಾಗಿ ಪ್ರಭಾವ ಬೀರಿ ಈ ಸಾಲಗಳನ್ನು ಮಂಜೂರು ಮಾಡಿಸಿರುವುದು ಬೆಳಕಿಗೆ ಬಂದಿದೆ ಎಂದು ವರದಿಗಳಾಗಿವೆ.

ಇನ್ನು ಸೆಬಿಯು ಅನಿಲ್‌ ಅಂಬಾನಿಗೆ ಮಾತ್ರವಲ್ಲದೇ ಆರ್‌ಎಚ್‌ಎಫ್‌ಎಲ್‌ ಮಾಜಿ ಪ್ರಮುಖ ಅಧಿಕಾರಿಗಳಾದ ರವೀಂದ್ರ ಸುಧಾಲ್ಕರ್‌, ಅಮಿತ್‌ ಬಾಪ್ನಾ ಹಾಗೂ ಪಿಂಕೇಶ್‌ ಆರ್‌ ಷಾ ಸೇರಿದಂತೆ ಇತರ ಘಟಕಗಳಿದೆ ದಂಡ ವಿಧಿಸಿದೆ.

 

 

 

Tags:
error: Content is protected !!