Mysore
22
broken clouds

Social Media

ಸೋಮವಾರ, 12 ಜನವರಿ 2026
Light
Dark

ಕೋಟೆಯಲ್ಲಿ ಹೆಚ್ಚುತ್ತಿರುವ ಅಕ್ರಮ ಚಟುವಟಿಕೆಗಳು

• ಮಂಜು ಕೋಟೆ

ಎಚ್.ಡಿ ಕೋಟೆ: ಜಿಲ್ಲೆಯ ಗಡಿಭಾಗವಾದ ತಾಲ್ಲೂ ಕಿನಲ್ಲಿ ಅಕ್ರಮ ಚಟುವಟಿಕೆಗಳು ಹೆಚ್ಚುತ್ತಿರುವುದು ಹಾಗೂ ವಾಹನ ಸಂಚಾರ ದಟ್ಟಣೆ ಹೆಚ್ಚುತ್ತಿರುವುದು ನೂತನ ಪೊಲೀಸ್ ವರಿಷ್ಠಾಧಿ ಕಾರಿಗೆ ಸವಾಲಾಗಿ ಪರಿಣಮಿಸಿದೆ.

ಗಡಿಭಾಗ, ಅಭಯಾರಣ್ಯ, ಜಲಾಶಯಗಳನ್ನು ಹೊಂದಿರುವ ಈ ತಾಲ್ಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿ, ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕು ವುದು ಪೊಲೀಸ್ ಇಲಾಖೆಗೆ ದೊಡ್ಡ ಸವಾಲಾಗಿದೆ.

ಕೇರಳ ರಾಜ್ಯದ ಪಕ್ಕದಲ್ಲೇ ಇರುವುದರಿಂದ ಕೋಟೆ ತಾಲ್ಲೂಕಿನಲ್ಲಿ ಅಕ್ರಮ ಚಟುವಟಿಕೆಗಳು ನಿರಂತರ ವಾಗಿ ನಡೆಯುತ್ತಿವೆ ಎಂಬ ಆರೋಪ ಕೇಳಿಬಂದಿದೆ. ನಮ್ಮ ರಾಜ್ಯದಲ್ಲಿ ಲಾಟರಿ ನಿಷೇಧವಾಗಿದ್ದರೂ ನೆರೆಯ ಕೇರಳ ರಾಜ್ಯದ ಲಾಟರಿಗಳ ಮಾರಾಟ, ಜೂಜಾಟ ಪಟ್ಟಣ ಸೇರಿದಂತೆ ಪ್ರಮುಖ ಕೇಂದ್ರ ಸ್ಥಾನಗಳಲ್ಲಿ ರಾಜಾರೋಷವಾಗಿ ನಡೆಯುತ್ತಿರುವುದು ಪೊಲೀ ಸರನ್ನು ಚಿಂತೆಗೀಡು ಮಾಡಿದೆ. ಈ ದುಶ್ಚಟಕ್ಕೆ ಬಲಿಯಾಗುತ್ತಿರುವವರ ಬೀದಿಪಾಲಾಗುತ್ತಿವೆ. ಕುಟುಂಬಗಳು

ಗಾಂಜಾ ಮಾರಾಟ ನಡೆಯುತ್ತಿರುವುದರಿಂದ ಅವುಗಳ ಚಟಕ್ಕೆ ಬಲಿಯಾಗುತ್ತಿರುವ ಯುವಕರು ದಾರಿ ತಪ್ಪುತ್ತಿದ್ದಾರೆ. ಅಮಲು ಪದಾರ್ಥಗಳ ಮಾರಾಟವೂ ಹೆಚ್ಚುತ್ತಿದೆ.

ಗಡಿ ಭಾಗ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟದಿಂದ ಕೂಲಿ ಕಾರ್ಮಿಕರು, ರೈತರು, ಆದಿವಾಸಿ ಜನರು ವಿಪರೀತದ ಕುಡಿತದ ಚಟಕ್ಕೆ ಬಲಿಯಾಗುತ್ತಿದ್ದಾರೆ. ತಮ್ಮ ಆರೋಗ್ಯ ಹಾಳುಮಾಡಿಕೊಂಡು ಸಾವಿಗೀಡಾ ಗುವಜತೆಗೆ ತಮ್ಮ ಕುಟುಂಬದವರನ್ನೂ ಬೀದಿಪಾಲು ಮಾಡುತ್ತಿದ್ದಾರೆ.

ಕಬಿನಿ, ತಾರಕ, ನುಗು, ಹೆಬ್ಬಾಳ ಜಲಾಶಯಗಳ ವ್ಯಾಪ್ತಿಯಲ್ಲಿ ರಜಾ ದಿನಗಳು ಹಾಗೂ ಇನ್ನಿತರ ದಿನಗಳಲ್ಲಿ ಮೋಜು-ಮಸ್ತಿಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಮದ್ಯದ ಬಾಟಲಿಗಳು, ಪ್ಲಾಸ್ಟಿಕ್ ವಸ್ತುಗಳು, ಇನ್ನಿತರ ಪದಾರ್ಥಗಳನ್ನು ಜಲಾಶಯಗಳ ಸುತ್ತಮುತ್ತ ಬೀಸಾಡುತ್ತಿದ್ದು, ಪರಿಸರವನ್ನೇ ಹಾಳು ಮಾಡುತ್ತಿದ್ದಾರೆ.

ಸಂಚಾರ ದಟ್ಟಣೆ: ಎಚ್.ಡಿ.ಕೋಟೆ ಪಟ್ಟಣ, ಹ್ಯಾಂಡ್‌ ಪೋಸ್ಟ್, ಅಂತರಸಂತೆ, ಹೊಮ್ಮರಗಳ್ಳಿ, ಸರಗೂರು ಇನ್ನಿತರ ಪ್ರದೇಶಗಳಲ್ಲಿ ಪ್ರತಿನಿತ್ಯವೂ ವಾಹನಗಳನ್ನು ಎಲ್ಲೆಂದರಲ್ಲಿ ಓಡಿಸುವುದು ಮತ್ತು ನಿಲುಗಡೆ ಮಾಡುತ್ತಿರುವುದರಿಂದ ಸಾರ್ವಜನಿಕರು ಕಿರಿಕಿರಿ ಅನುಭವಿಸುತ್ತಿದ್ದಾರೆ.

ಹೊರ ರಾಜ್ಯ, ಹೊರ ದೇಶಗಳಿಂದ ತಾಲ್ಲೂಕಿನ ರೆಸಾರ್ಟ್ ಗಳಿಗೆ ಬರುವ ಪ್ರವಾಸಿಗರು ಈ ನಿಯಮ ಉಲ್ಲಂಘನೆಗಳನ್ನು ಗಮನಿಸಿ ತಾಲ್ಲೂಕಿನ ಅವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿರುವುದು ಕಂಡುಬರುತ್ತಿದೆ.

ಬಹುತೇಕ ಪೊಲೀಸ್ ಠಾಣೆಗಳಲ್ಲಿ ಹಲವಾರು ಅಧಿಕಾರಿಗಳು ಹಲವು ವರ್ಷಗಳಿಂದ ಕೆಲಸ ಮಾಡು ತ್ತಿದ್ದು, ಕೆಲಸಗಳು ಚುರುಕಿನಿಂದ ನಡೆಯುತ್ತಿಲ್ಲ ಎಂಬ ಆರೋಪವಿದೆ. ಇನ್ನಾದರೂ ಪೊಲೀಸ್ ವರಿಷ್ಠಾಧಿಕಾರಿಗಳು, ಸರ್ಕಲ್ ಇನ್‌ಸ್ಪೆಕ್ಟರ್, ಎಸ್‌ಐಗಳು ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕಿದೆ.

ಕೋಟ್ಸ್‌))

ಹೆಚ್.ಡಿ.ಕೋಟೆ ಕ್ಷೇತ್ರದ ಸ್ಥಿತಿಗತಿಗಳನ್ನು ಗಮನಿಸಿದ್ದು, ನಿರಂತರವಾಗಿ ಸಭೆ ನಡೆಸಿ ತಂಡ ರಚನೆ ಮಾಡಿ ಗಡಿಭಾಗದ ಈ ತಾಲ್ಲೂಕಿನಲ್ಲಿ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಿ, ಸಂಚಾರ ನಿಯಮಗಳು ಪಾಲನೆ ಆಗುವ ರೀತಿಯಲ್ಲಿ ಮತ್ತು ಪೊಲೀಸ್ ಠಾಣೆಗಳಲ್ಲಿ ಮತ್ತಷ್ಟು ಕೆಲಸ ಕಾರ್ಯಗಳು ಚುರುಕುಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು.
-ವಿಷ್ಣುವರ್ಧನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

Tags:
error: Content is protected !!