Mysore
20
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಮೈಸೂರು ದಸರಾ 2024: ನಾಳೆ ಗಜಪಯಣ; ಈ ಬಾರಿಯೂ ಅಭಿಮನ್ಯುವೇ ಕ್ಯಾಪ್ಟನ್‌!

ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ನಡೆಯಲಿರುವ ವಿಶ್ವವಿಖ್ಯಾತ ನಾಡ ಹಬ್ಬ ದಸರಾ ಗೆ ಕ್ಷಣಗಣನೆ ಶುರುವಾಗಿದ್ದು, ದಸರಾದ ಜಂಬೂಸವಾರಿಯಲ್ಲಿ ಭಾಗವಹಿಸಲಿರುವ ಗಜಪಡೆಯ ಮೊದಲ ತಂಡ ನಾಳೆ (ಆ.21) ಸಾಂಪ್ರದಾಯಿಕವಾಗಿ ಕಾಡಿನಿಂದ ನಾಡಿನತ್ತ ಆಗಮಿಸಲಿವೆ.

ನಾಳೆ ಬೆಳಿಗ್ಗೆ 10.20 ರಿಂದ 10.45 ವರೆಗಿನ ಶುಭ ತುಲಾ ಲಘ್ನದಲ್ಲಿ ಪೂಜೆ ಸಲ್ಲಿಸುವ ಮೂಲಕ ಹುಣಸೂರಿನ ವೀರನಹೊಸಹಳ್ಳಿಯಿಂದ ಅಭಿಮನ್ಯು ನೇತೃತ್ವದ 9 ಆನೆಗಳ ತಂಡ ಗಜಪಯಣ ನಡೆಸಲಿವೆ. ಆ ಮೂಲಕ 2024ರ ದಸರಾ ಕಾರ್ಯಕ್ರಮಗಳಿಗೆ ಅಧಿಕೃತ ಚಾಲನೆ ಸಿಗಲಿದೆ.

ಗಜಪಯಣದ ಬಳಿಕ ವೀರನಹೊಸಹಳ್ಳಿಯಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಚ್‌ಸಿ ಮಹದೇವಪ್ಪ, ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ದಸರಾಗೆ ಆಗಮಿಸಲಿರುವ ಮಾವುತರು ಹಾಗೂ ಕಾವಾಡಿಗಳಿಗೆ ಇದೇ ಸಂದರ್ಭದಲ್ಲಿ ಸನ್ಮಾನ ಕೂಡಾ ನಡೆಯಲಿದೆ.

ಈ ಬಾರಿಯ ದಸರಾ ಗಜಪಡೆಯಲ್ಲಿ ಒಟ್ಟು 14 ಆನೆಗಳಿರಲಿವೆ. ಈ ಬಾರಿಯೂ ಕೂಡಾ ಅಂಬಾರಿ ಹೊರುವ ಜವಾಬ್ದಾರಿ ಅಭಿಮನ್ಯು ಹೆಗಲ ಮೇಲಿದೆ. ಮೊದಲ ಹಂತದ ಗಜಪಯಣದಲ್ಲಿ ಅಭಿಮನ್ಯು ನೇತೃತ್ವದ 9 ಆನೆಗಳು ಆಗಮಿಸಲಿದ್ದು, ಎರಡನೇ ಹಂತದಲ್ಲಿ 5 ಆನೆಗಳು ಆಗಮಿಸಲಿವೆ. ಇನ್ನು ಹೆಚ್ಚುವರಿಯಾಗಿ ನಾಲ್ಕು ಆನೆಗಳನ್ನು ಮೀಸಲಿಟ್ಟುಕೊಳ್ಳಲಾಗಿದೆ.

ಮೊದಲ ಹಂತದಲ್ಲಿ ಆಗಮಿಸಲಿರುವ ಆನೆಗಳ ಪಟ್ಟಿ: ಅಭಿಮನ್ಯು (ನಾಯಕ), ಧನಂಜಯ, ಭೀಮ, ಗೋಪಿ, ಕಂಜನ್‌, ರೋಹಿಣಿ, ಏಕಲವ್ಯ, ವರಲಕ್ಷ್ಮಿ, ಲಕ್ಷ್ಮೀ ಆನೆಗಳು ಬರಲಿವೆ.

ಎರಡನೇ ಹಂತದಲ್ಲಿ ಆಗಮಿಸಲಿರುವ ಆನೆಗಳ ಪಟ್ಟಿ: ಪ್ರಶಾಂತ, ಮಹೇಂದ್ರ ಸುಘ್ರೀವಾ, ಹಿರಣ್ಯ ಮತ್ತು ಲಕ್ಷ್ಮೀ ಆನೆಗಳು.

ವೀರನಹೊಸಹಳ್ಳಿಯಿಂದ ಗಜಪಯಣದ ಮೂಲಕ ಆಗಮಿಸುವ ಆನೆಗಳನ್ನು ಆ.23 ರಂದು ಅರಮನೆಗೆ ಬರಮಾಡಿಕೊಳ್ಳಲಾಗುವುದು.

Tags: