Mysore
14
clear sky

Social Media

ಶನಿವಾರ, 27 ಡಿಸೆಂಬರ್ 2025
Light
Dark

ಕೋಲ್ಕತ್ತಾ ವೈದ್ಯರ ಮೇಲೆ ಅತ್ಯಾಚಾರ ಪ್ರಕರಣ: ಕ್ರೂರಿಗಳಿಗೆ ಶಿಕ್ಷೆ ಆಗಲೇಬೇಕು ಎಂದ ನಟ ಧ್ರುವ ಸರ್ಜಾ

ಬೆಂಗಳೂರು: ಕೋಲ್ಕತ್ತಾ ವೈದ್ಯರ ಮೇಲೆ ಅತ್ಯಾಚಾರವೆಸಗಿ ಬರ್ಬರವಾಗಿ ಹತ್ಯೆ ಮಾಡಿರುವ ಪ್ರಕರಣವನ್ನು ಸ್ಯಾಂಡಲ್‌ವುಡ್‌ ನಟ ಧ್ರುವಸರ್ಜಾ ಖಂಡಿಸಿದ್ದಾರೆ.

ಆಗಸ್ಟ್.‌9ರಂದು ರಾತ್ರಿ ಪಾಳಿಯಲ್ಲಿದ್ದ ಟ್ರೈನಿ ವೈದ್ಯೆಯ ಮೇಲೆ ಅತ್ಯಾಚಾರ ಎಸಗಲಾಗಿತ್ತು. ಸುಮಾರು 36 ಗಂಟೆಗಳ ಕಾಲ ನಿರಂತರ ಕೆಲಸ ಮಾಡಿದ್ದ ವೈದ್ಯೆ ವಿಶ್ರಾಂತಿಗೆಂದು ತೆರಳಿದ್ದರು. ಆ ವೇಳೆ ಅತ್ಯಾಚಾರ ಮಾಡಿ, ಹಿಂಸೆ ಕೊಟ್ಟು ಹತ್ಯೆ ಮಾಡಲಾಗಿತ್ತು.

ಕ್ರೂರಿಯ ಈ ಕೃತ್ಯದ ವಿರುದ್ಧ ವೈದ್ಯರು ಪ್ರತಿಭಟನೆ ಮಾಡುತ್ತಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಟ ಧ್ರುವ ಸರ್ಜಾ ಕೂಡ ಆಕ್ರೋಶ ಹೊರಹಾಕಿದ್ದು, ಕ್ರೂರಿಗೆ ಶಿಕ್ಷೆ ಆಗಲೇಬೇಕು ಎಂದು ಆಗ್ರಹಿಸಿದ್ದಾರೆ.

ಮಾರ್ಟಿನ್‌ ಚಿತ್ರದ ಪ್ರಮೋಷನ್‌ನಲ್ಲಿರುವ ನಟ ಧ್ರುವ ಸರ್ಜಾ ಅವರು, ಅದರಿಂದ ಬಿಡುವು ಮಾಡಿಕೊಂಡು ವಿಡಿಯೋ ಮಾಡಿದ್ದಾರೆ. ನಮ್ಮದು ರಾಮಜನ್ಮಭೂಮಿ ಅಂತ ಕರೆಯುತ್ತೇವೆ. ಕೆಲವು ಕಿಡಿಗೇಡಿಗಳು ಮಾಡುತ್ತಿರುವ ಕೃತ್ಯಗಳಿಂದ ನಿಜವಾಗಲೂ ನಮ್ಮ ಭಾರತಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದು ಕಿಡಿಕಾರಿದ್ದಾರೆ.

ಪ್ರತಿಯೊಬ್ಬರ ಮನೆಯಲ್ಲಿಯೂ ಗಂಡು ಮಕ್ಕಳಿಗೆ ಮೂರು ವಿಷಯಗಳನ್ನು ಹೇಳಿಕೊಡಬೇಕು. ಹೇಗೆ ಹೆಣ್ಣು ಮಕ್ಕಳನ್ನು ಪ್ರೊಟೆಕ್ಟ್‌ ಮಾಡಬೇಕು. ಹೇಗೇ ಸಪೋರ್ಟ್‌ ಮಾಡುವುದು. ಹೇಗೆ ರೆಸ್ಪೆಕ್ಟ್‌ ಕೊಡಬೇಕು ಎಂದು ಹೇಳಿಕೊಡಲೇಬೇಕು.

ಅತ್ಯಾಚಾರ ಮಾಡಿದವರನ್ನು ನಡು ರಸ್ತೆಯಲ್ಲಿ ನಿಂತು ಸುಟ್ಟಾಕಿದರೂ ಸಮಾಧಾನ ಆಗಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

Tags:
error: Content is protected !!