Mysore
18
clear sky

Social Media

ಮಂಗಳವಾರ, 20 ಜನವರಿ 2026
Light
Dark

ಬೆಂಗಳೂರಲ್ಲಿ ಝಿಕಾ ವೈರಸ್‌ ಪತ್ತೆ: ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಿಷ್ಟು?

ಬೆಂಗಳೂರು: ಝೀಕಾ ವೈರಸ್‌ ಮತ್ತೆ ರಾಜ್ಯದಲ್ಲಿ ಉಲ್ಬಣಗೊಂಡಿದ್ದು, ನಗರದ ಜಿಗಣಿ ಪ್ರದೇಶದಲ್ಲಿ ಐವರಲ್ಲಿ ಝೀಕಾ ವೈರಸ್‌ ಪತ್ತೆಯಾಗಿದೆ. ಇದರಿಂದಾಗಿ ಇಡೀ ಜಿಗಣಿ ಪ್ರದೇಶವನ್ನು ಕಂಟೈನ್ಮೆಂಟ್‌ ಜೋನ್‌ ಎಂದು ಘೋಷಿಸಲಾಗಿದೆ. ಇದರ ಜೊತೆ ಸೋಂಕಿತ ಕುಟುಂಬದವರ ರಕ್ತ ಪರೀಕ್ಷೆ ನಡೆಸಲಾಗುತ್ತಿದೆ.

ಈ ಬಗ್ಗೆ ಮಾತನಾಡಿರುವ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಎರಡು ವಾರದಲ್ಲಿ ಐದು ಪ್ರಕರಣಗಳು ಪತ್ತೆಯಾಗಿವೆ. ಜನರು ಈ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಆದರೆ, ಗರ್ಭಿಣಿಯರು ಎಚ್ಚರಿಕೆಯಿಂದಿರಬೇಕು ಎಂದು ಸಲಹೆ ನೀಡಿದ್ದಾರೆ.

ಇನ್ನು ಝೀಕಾ ವೈರಸ್‌ ಪತ್ತೆಯಾಗಿರುವ ಪ್ರದೇಶಗಳ ಒಂದು ಕಿಮೀ ವ್ಯಾಪ್ತಿಯಲ್ಲಿ ಕಂಟೈನ್ಮೆಂಟ್‌ ಜೋನ್‌ ಎಂದು ಘೋಷಿಸಲಾಗಿದ್ದು, ಝೀಕಾ ವೈರಸ್‌ ತಗುಲದಂತೆ ಮನ್ನೆಚ್ಚರಿಕೆ ವಹಿಸಲಾಗುವುದು. ಸಾರ್ವಜನಿಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಆದರೆ ಎಲ್ಲರೂ ಮುನ್ನೆಚ್ಚರಿಕೆ ವಹಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Tags:
error: Content is protected !!