ಬೆಂಗಳೂರು: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪಾತ್ರ ಇದೆ ಎಂದು ಪ್ರಾಷಿಕ್ಯೂಷನ್‌ಗೆ ಕೊಡಲಾಗಿಲ್ಲ, ಬದಲಾಗಿ ಈ ಹಗರಣದಲ್ಲಿ ನ್ಯಾಯಯುತವಾಗಿ ತನಿಖೆ ನಡೆಸಲು ಅನುಮತಿಸಲಾಗಿದೆ ಎಂದು ರಾಜ್ಯಪಾಲರ ನಡೆಯನ್ನು ಎಂಎಲ್‌ಸಿ ಸಿಟಿ ರವಿ ಸಮರ್ಥಿಸಿಕೊಂಡಿದ್ದಾರೆ.
13 ವರ್ಷಗಳ ಹಿಂದೆ ಬಿಎಸ್ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಅಂದಿನ ರಾಜ್ಯಪಾಲ ಹಂಸರಾಜ್ ಭಾರಧ್ವಜ್ ಅವರು ತನಿಖೆಗೆ ಆದೇಶ ನೀಡಿದ್ದರು. ಆಗ ಸಿದ್ದರಾಮಯ್ಯ ಅವರು ರಾಜ್ಯಪಾಲರ ನಡೆಯನ್ನು ಸಮರ್ಥಿಸಿಕೊಂಡಿದ್ದರು. ಆದೇ ರೀತಿ ಈಗಲೂ ನ್ಯಾಯಯುತ ತನಿಖೆಗಾಗಿ ಪ್ರಾಷಿಕ್ಯೂಷನ್‌ಗೆ ಅನುಮತಿಸಲಾಗಿದೆ ಎಂದು ಅವರು ಹೇಳಿದರು.
ಸಿಎಂ ಸಿದ್ದರಾಮಯ್ಯ ಅವರಿಗೆ ನಲವತ್ತು ವರ್ಷಗಳ ರಾಜಕೀಯ ಅನುಭವವಿದೆ. ಹದಿಮೂರು ವರ್ಷಗಳ ಹಿಂದೆ ಏನು ಹೇಳಿದ್ದರೋ ಈಗಲೂ ಅದನ್ನೇ ಹೇಳಬೇಕು. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಎಲ್ಲರಿಗೂ ಒಂದೇ ಸಂವಿಧಾನ. ರಾಜ್ಯಪಾಲರು ತೀರ್ಪು ಕೊಟ್ಟಿಲ್ಲ. ಕೇವಲ ತನಿಖೆಗೆ ಮಾತ್ರ ಅನುಮತಿ ಕೊಟ್ಟಿದ್ದಾರೆ. ಪ್ರಮಾಣಿಕರಾಗಿದ್ದರೇ ನೀವೇಗೆ ತನಿಖೆಗೆ ಎದರುತ್ತಿದ್ದೀರಿ? ಎಂದು ಸಿಟಿ ರವಿ ಪ್ರಶ್ನಿಸಿದ್ದಾರೆ.