ಸಾವೊಪಾಲೊ: ಬ್ರಿಜಿಲ್‌ನ ನ್ಯಾಯಾಧೀಶ ಅಲೆಕ್ಸಾಂಡ್ರೆ ಡಿ ಮೊರೇಸ್ ಅವರು ಎಕ್ಸ್‌ಗೆ ಸೆನ್ಸಾರ್ ಮಾಡಲು ಆದೇಶ ನೀಡಿದ ಬಳಿಕ, ಸಾಮಾಜಿಕ ಜಾಲತಾಣ ಎಕ್ಸ್ ಬ್ರೆಜಿಲ್‌ನಲ್ಲಿ ತನ್ನ ಕಾರ್ಯಚರಣೆ ನಿಲ್ಲಿಸುವುದಾಗಿ ಶನಿವಾರ ಹೇಳಿದೆ.
ಎಕ್ಸ್‌ನಿಂದ ಕೆಲವು ವಿಷಯಗಳನ್ನು ತೆಗೆದಹಾಕುವ ಕಾನೂನುಗಳನ್ನು ಪಾಲಿಸದೇ ಇದ್ದರೆ, ಬ್ರೆಜಿಲ್‌ನಲ್ಲಿರುವ ಎಕ್ಸ್‌ನ ಕಾನೂನು ಪ್ರತಿನಿಧಿಗಳನ್ನು ಬಂಧಿಸುವುದಾಗಿ ನ್ಯಾಯಾಧೀಶರು ಹೇಳಿದ ನಂತರ ಎಕ್ಸ್ ಈ ಕ್ರಮ ಕೈಗೊಂಡಿದೆ ಎಂದು ವರದಿಯಾಗಿದೆ. ಆದಾಗ್ಯೂ, ಈ ಬಗ್ಗೆ ಸುಪ್ರೀಂ ಕೋರ್ಟ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.