ವಿವಿಧ ಗ್ರಾಮಗಳಲ್ಲಿ ಗುದ್ದಲಿ ಪೂಜೆ,
ಪಿರಿಯಾಪಟ್ಟಣ: ಸಕಾಲಕ್ಕೆ ಸರಿಯಾಗಿ ನೀರೀಕ್ಷೆಗೂ ಮೀರಿ ಮಳೆಯಾಗಿ ಕೆರೆಕಟ್ಟೆಗಳು ಮೈದುಂಬಿ ತಾಲೂಕಿನ ರೈತರ ಕೃಷಿ ಚಟುವಟಿಕೆಗೆ ಸಹಕಾರಿಯಾಗಿದೆ ಎಂದು ರೇಷ್ಮೆ ಹಾಗೂ ಪಶುಪಾಲನ ಸಚಿವ ವೆಂಕಟೇಶ್ ಹೇಳಿದರು.
ತಾಲೂಕಿನ ವಿವಿಧ ಹಳ್ಳಿಗಳಿಗೆ ಭೇಟಿ ನೀಡಿ ಮೂಲ ಸೌಕರ್ಯಗಳಾದ ಕುಡಿಯುವ ನೀರು, ರಸ್ತೆ, ಚರಂಡಿ, ಹಾಗೂ ಕೆರೆಗಳ ಅಭಿವೃದ್ಧಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ತಾಲೂಕಿನ ಹಲವು ಹಳ್ಳಿಗಳಲ್ಲಿ ಮೂಲ ಸೌಕರ್ಯಗಳ ಕೊರೆತೆಯಿದ್ದು ಹಂತ ಹಂತವಾಗಿ ಸಮರ್ಪಕವಾಗಿ ಅಭಿವೃದ್ಧಿ ಪಡಿಸಲು ಪ್ರಯತ್ನಿಸುತ್ತೇನೆ ಎಂದರು.
ಮರಡಿಯೂರು ಗ್ರಾಮದ ರಸ್ತೆ ಅಭಿವೃದ್ಧಿಗೆ ₹.೧.೩೫ಲಕ್ಷ, ಮುತ್ತಿನ ಮುಳ್ಳುಸೋಗೆ ಗ್ರಾಮದ ಚರಂಡಿ ದುರಸ್ತಿಕರಣಕ್ಕೆ ₹.೨೫ಲಕ್ಷ ,ಶ್ಯಾನಭೋಗನಹಳ್ಳಿ ಗ್ರಾಮದ ಹಾಲಿನ ಡೇರಿ ಆವರಣದಲ್ಲಿ ತಡೆಗೋಡೆ ನಿರ್ಮಾಣಕ್ಕೆ ₹.೬೦ಲಕ್ಷ, ದೊಡ್ಡನೇರಳೆ ಕೆರೆ ಅಭಿವೃದ್ಧಿಗೆ ೫೦ಲಕ್ಷ, ಲಕ್ಷ್ಮಿಪುರ ಗ್ರಾಮದ ಡಾಂಬರ್ ರಸ್ತೆ ಅಭಿವೃದ್ಧಿಗೆ ₹.೧.೫ಲಕ್ಷ, ಚಪ್ಪರದಹಳ್ಳಿ ಸಿ.ಸಿ ರಸ್ತೆ ನಿರ್ಮಾಣಕ್ಕೆ₹. ೧.೭೫ ಲಕ್ಷ ವೆಚ್ಚ ಮಾಡಿ ಗ್ರಾಮಗಳ ಅಭಿವೃದ್ಧಿ ಪಡಿಸಲು ಪ್ರಯತ್ನಿಸಿದ್ದೇನೆ. ತಾವುಗಳು ಸಹ ಅಡೆತಡೆಗಳಿಗೆ ಸಹಕರಿಸಬೇಕು, ಈ ಗ್ರಾಮಗಳ ಅಭಿವೃದ್ಧಿಗೆ ಸರ್ಕಾರದ ವತಿಯಿಂದ ಟೆಂಡರ್ ಕರೆದಿದ್ದು ಅಧಿಕಾರಿಗಳು ಸೂಚನೆ ಮೇರೆಗೆ ಶೀಘ್ರದಲ್ಲೆ ಕಾಮಗಾರಿ ಚಾಲನೆಗೊಳ್ಳಲಿದೆ ಎಂದರು.
ಸಚಿವರಿಗೆ ಗ್ರಾಮಸ್ಥರ ಬೇಡಿಕೆ
ಮರಡಿಯೂರು ಗ್ರಾಮಕ್ಕೆ ಸಮುದಾಯ ಭವನ ನಿರ್ಮಾಣ , ಗ್ರಾಮದ ಕ್ರಿಶ್ಚಿಯನ್ ಚರ್ಚ್ ಮುಂಭಾಗದ ಅವರಣಕ್ಕೆ ಗಂಟೆ ಗೋಪುರ ನಿರ್ಮಾಣಕ್ಕೆ ಫಾದರ್ ಜೋಸೆಫ್ ಮೆರಿ ಒತ್ತಾಯ,ಹಾಗೂ ಮುತ್ತಿನ ಮುಳ್ಳುಸೋಗೆ ಗ್ರಾಮದ ಸರ್ಕಾರಿ ಜಾಗದಲ್ಲಿ ಚೌಡೇಶ್ವರಿ ಸಮುದಾಯ ಭವನ ನಿರ್ಮಾಣಕ್ಕೆ ಗ್ರಾಮಸ್ಥರ ಒತ್ತಾಯ ಮಾಡಿದರು.
ಸಚಿವರಿಂದ ಅಧಿಕಾರಿಗೆ ತರಾಟೆ
ಮರಡಿಯೂರು ಗ್ರಾಮದ ಜನರ ಭೂಮಿ ಒಂದೇ ಸರ್ವೇ ನಂಬರ್ನಲ್ಲಿದ್ದು, ಕಳೆದ ಹತ್ತು ವರ್ಷಗಳಿಂದ ಹಾರ್ನಹಳ್ಳಿ ಹೋಬಳಿಗೆ ಗ್ರಾಮ ಲೆಕ್ಕಧಿಕಾರಿಯಾಗಿರುವಾಗಲೇ ಇವರ ಗಮನಕ್ಕೆ ತಂದಿದ್ದೆವು, ಈಗ ಆನಂದ್ ರವರು ಕಂದಾಯ ನೀರೀಕ್ಷಕರಾಗಿದ್ದರು ಸಹ ಪಕ್ಕ ಪೋಡ್ ಬಗ್ಗೆಯಲ್ಲಿ ಖಾತೆ ಮಾಡದೇ ಫೈಲ್ ಕಳೆದು ಹೋಗಿದೆ ಎಂದು ಜವಾಬ್ ನೀಡುತ್ತಿರುವುದು ಯಾವ ನ್ಯಾಯ ಎಂದು ಗ್ರಾಮದ ಜನರು ಕಂದಾಯ ನಿರೀಕ್ಷಕ ಆನಂದ್ ಮೇಲೆ ಆರೋಪ ಮಾಡಿದರು.
ಈ ವೇಳೆ ಗರಂ ಆದ ಸಚಿವರು ಇನ್ನೆರಡು ವಾರದೊಳಗೆ ಗೆ ಈ ಕೆಲಸ ಮುಗಿಸಿ ಜನರ ಕಷ್ಟಗಳಿಗೆ ಸ್ಪಂದಿಸಿ ಇಲ್ಲಾ ಕ್ರಮ ಕೈಗೊಳ್ಳಿ ಎಂದು ಎಚ್ಚರ ನೀಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ನಿಸರ್ಗಪ್ರಿಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರೆಹಮಾತ್ ಜಾನ್ ಬಾಬು, ಡಿ.ಟಿ ಸ್ವಾಮಿ, ಇ,ಓ,ಸುನೀಲ್ ಕುಮಾರ್, ತಾಲೂಕು ಕಾರ್ಯಪಾಲಕ ಅಭಿಯಂತರರಾದ ವೆಂಕಟೇಶ್ ಎಂ.ಆರ್, ಪಶುಪಾಲನ ಸಹಾಯಕ ನಿರ್ದೇಶಕ ಸೋಮಯ್ಯ, ಸಣ್ಣ ನೀರಾವರಿ ಎಇಇ ಕೃಷ್ಣಮೂರ್ತಿ, ಕೃಷಿ ಅಧಿಕಾರಿ ಪ್ರಸಾದ್, ಆಹಾರ ಇಲಾಖೆ ಸಣ್ಣಸ್ವಾಮಿ, ಸಮಾಜ ಕಲ್ಯಾಣ ಇಲಾಖೆಯ ಚಂದ್ರಶೇಖರ್, ಹಿಂದುಳಿದ ಕಲ್ಯಾಣ ಕಲ್ಯಾಣಧಿಕಾರಿ ಕೃಷ್ಣೇಗೌಡ ಹೊಸಳ್ಳಿ, ಕಾವೇರಿ ನೀರಾವರಿ ನಿಗಮದ ಅಭಿಯಂತರರಾದ ಎಇಇ ಗೋಕುಲ್, ಡೈರಿ ಅಧ್ಯಕ್ಷ ಬಸವರಾಜ್ ಸೇರಿದಂತೆ ಮುಖಂಡರು ಹಾಗೂ ಗ್ರಾಮಸ್ಥರು ಇದ್ದರು.