Mysore
31
few clouds

Social Media

ಗುರುವಾರ, 23 ಏಪ್ರಿಲ 2026
Light
Dark

ಮೈಸೂರು: ಬಿಜೆಪಿ ಯುವಮೋರ್ಚ ವತಿಯಿಂದ ಹರ್‌ ಘರ್‌ ತಿರಂಗ ಅಭಿಯಾನ

ಮೈಸೂರು:  78ನೇ  ಸ್ವತಂತ್ರ ದಿನಾಚರಣೆಯ ಅಂಗವಾಗಿ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಯುವಮೋರ್ಚ ವತಿಯಿಂದ  ಹರ್ ಘರ್ ತಿರಂಗ ಅಭಿಯಾನ ನಡೆಸಲಾಯಿತು.

ಅಭಿಯಾನದ ಬಳಿಕ ಕನ್ನಡ ಪತ್ರಿಕೋದ್ಯಮದ ಪಿತಾಮಹ ಎಂ. ವೆಂಕಟಕೃಷ್ಣಯ್ಯ (ತಾತಯ್ಯ) ಉದ್ಯಾನವನದಲ್ಲಿ ಸ್ವಚ್ಚಭಾರತ ಅಭಿಯಾನದ ಮೂಲಕ ಉದ್ಯಾನವನ್ನು ಸ್ವಚ್ಚ ಗೊಳಿಸಲಾಯಿತು.


ನಂತರ ಕೆ.ಆರ್. ಕ್ಷೇತ್ರದ ಶಾಸಕರಾದ ಟಿ.ಎಸ್. ಶ್ರೀವತ್ಸ ರವರ ನೇತೃತ್ವದಲ್ಲಿ ತಾತಯ್ಯನವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.

ಅಭಿಯಾನದಲ್ಲಿ  ಕೆ.ಆರ್. ಕ್ಷೇತ್ರದ  ಅಧ್ಯಕ್ಷ ಗೋಪಾಲ್ ರಾಜ್ ಅರಸ್, ಯುವಮೋರ್ಚಾ ಅಧ್ಯಕ್ಷ ಕೆ.ಎಂ. ನಿಶಾಂತ್, ದೇವರಾಜ್ ಗೌಡ, ಪಾಲಿಕೆ ಮಾಜಿ ಸದಸ್ಯ ಬಿವಿ. ಮಂಜುನಾಥ್, ಪ್ರದೀಪ್, ಯುವಮೋರ್ಚಾ ಕಾರ್ಯಕರ್ತರಾದ ಅಕ್ಷಯ್, ಮಧು, ನಿತೇಶ್, ಹರ್ಷ, ಶ್ರೀಕಂಠ, ಪ್ರತೀಕ್, ಪ್ರಶೀಕ್, ಚರಣ್, ಪವನ್, ಕಾರ್ತಿಕ್, ಅಭಿಶೇಕ್, ವಿನೀತ್, ವರುಣ್, ರವಿ, ಮನೋಜ್, ಸಾಯಿಕುಮಾರ್, ದರ್ಷನ್, ಶ್ರೇಯಸ್‌ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Tags:
error: Content is protected !!