Mysore
34
scattered clouds

Social Media

ಸೋಮವಾರ, 11 ಮೇ 2026
Light
Dark

ಬೆಲೆ ಜೊತೆಗೆ ಇಳುವರಿಯೂ ಕಡಿಮೆಯಾದ ಶುಂಠಿ ಬೆಳೆ: ಕಂಗಾಲಾದ ಬೆಳೆಗಾರರು

ಮೈಸೂರು: ಮೈಸೂರಿನಲ್ಲಿ ಶುಂಠಿ ಬೆಳೆಗಾರರಿಗೆ ಹೊಸ ಸಮಸ್ಯೆಯೊಂದು ಎದುರಾಗಿದೆ.

ಮೈಸೂರು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಅನ್ನದಾತರು ಶುಂಠಿ ಬೆಳೆ ಬೆಳೆದಿದ್ದು, ಕಳೆದ ಕೆಲ ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದ ಶುಂಠಿಗೆ ಕೊಳೆರೋಗ ಕಾಣಿಸಿಕೊಂಡಿದೆ.

ಇದರ ಜೊತೆಗೆ ಈ ಬಾರಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಯತೇಚ್ಛವಾಗಿ ಶುಂಠಿ ಬೆಳೆಯಲಾಗಿದ್ದು, ಇಳುವರಿ ಕೂಡ ತೀವ್ರ ಕಡಿಮೆಯಾಗಿದೆ. ಈ ಬೆನ್ನಲ್ಲೇ ಶುಂಠಿ ಬೆಳೆಗೂ ಬೆಲೆಯೂ ಕೂಡ ಇಳಿಕೆಯಾಗಿದೆ.

ಬೇರೆ ಬೆಳೆಗಳಿಗೆ ಹೋಲಿಸಿದರೆ ಶುಂಠಿ ಬೆಳೆ ಬೆಳೆಯಲು ಕೀಟನಾಶಕ ಹಾಗೂ ಗೊಬ್ಬರಕ್ಕೆಂದೇ ಲಕ್ಷಾಂತರ ರೂಪಾಯಿ ಖರ್ಚಾಗುತ್ತಿದೆ. ಹೀಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ರೂ, ಶುಂಠಿಯಿಂದ ಅಧಿಕ ಲಾಭವಿದೆ ಎಂದು ರೈತರೆಲ್ಲಾ ಶುಂಠಿ ಬೆಳೆ ಬೆಳೆದಿದ್ದಾರೆ.

ಆದರೆ ವರುಣ ಈ ಬಾರಿ ಶುಂಠಿ ಬೆಳೆಗಾರರಿಗೆ ಸಂಕಷ್ಟ ತಂದೊಡ್ಡಿದ್ದಾನೆ. ಇದರ ಜೊತೆಗೆ ಕೆಲ ಭಾಗದಲ್ಲಿ ಶುಂಠಿ ಬೆಳೆ ಇಳುವರಿ ಜಾಸ್ತಿ ಕೊಟ್ಟಿದ್ದು, ರೈತರು ಕೂಡ ತುಂಬಾ ಖುಷಿಯಲ್ಲಿದ್ದರು.

ಈಗ ಶುಂಠಿ ಬೆಲೆ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಳೆಗಾರರು ತೀವ್ರ ಕಂಗಾಲಾಗಿದ್ದು, ಮುಂದಿನ ದಿನಗಳಲ್ಲಾದರೂ ಬೆಳೆಗೆ ಸೂಕ್ತ ಬೆಲೆ ಸಿಗುತ್ತದೆ ಎಂದು ಎದುರು ನೋಡುತ್ತಿದ್ದಾರೆ.

 

 

Tags:
error: Content is protected !!