Mysore
17
overcast clouds

Social Media

ಮಂಗಳವಾರ, 30 ಡಿಸೆಂಬರ್ 2025
Light
Dark

ಬ್ರೆಜಿಲ್‌ನಲ್ಲಿ ವಿಮಾನ ದುರಂತ: 62 ಮಂದಿ ಸಾವು

ಸಾವೋ ಪೌಲೋ: ಬ್ರೆಜಿಲ್‌ನ ಸಾವೋ ಪೌಲೋ ಬಳಿ ವಿಮಾನ ಪತನಗೊಂಡು, ಅದರಲ್ಲಿದ್ದ ಸಿಬ್ಬಂದಿ ಹಾಗೂ ಪ್ರಯಾಣಿಕರು ಸೇರಿ ಎಲ್ಲಾ 62 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ.

ಪರಾನಾ ರಾಜ್ಯದ ಕ್ಯಾಸ್ಕಾವೆಲ್‌ನಿಂದ ಸಾವೋ ಪೌಲೋ ಮುಖ್ಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟಿದ್ದ ವಿಫಾಸ್‌ ವಿಮಾನವು ಸಾವೋ ಪೌಲೊದಿಂದ ವಾಯುವ್ಯಕ್ಕೆ 80 ಕಿಮೀ ದೂರದಲ್ಲಿರುವ ವಿನ್ಹೆಡೋ ಪಟ್ಟಣದಲ್ಲಿ ಪತನಗೊಂಡಿದೆ.

ವಿಮಾನವು ಪತನ ಹೊಂದಲು ಕಾರಣವೇನು ಎಂಬುದರ ಬಗ್ಗೆ ಈಗ ತನಿಖೆ ಆರಂಭವಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ಪೈಲಟ್‌ ಎಂಜಿನ್‌ ಮೇಲೆ ನಿಯಂತ್ರಣ ಕಳೆದುಕೊಂಡು ಈ ದುರಂತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.

ಏರ್‌ಬಸ್‌ ಮತ್ತು ಇಟಾಲಿಯನ್‌ ಏರೋಸ್ಪೇಸ್‌ ಗ್ರೂಪ್‌ ಲಿಯೊನಾರ್ಡೋ ಜಂಟಿ ಒಡೆತನದ ಎಟಿಆರ್‌ ಕಂಪನಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

 

Tags:
error: Content is protected !!