Mysore
26
broken clouds

Social Media

ಮಂಗಳವಾರ, 13 ಜನವರಿ 2026
Light
Dark

ಸೆಟ್ಟೇರಿದ ಜೂ. ಎನ್‌ಟಿಆರ್‌-ಪ್ರಶಾಂತ್‌ ನೀಲ್‌ ಜೋಡಿಯ ಸಿನಿಮಾ!

ಬಹು ನಿರೀಕ್ಷಿತಾ ಕೆಜಿಎಫ್‌ ಡೈರೆಕ್ಟರ್‌ ಪ್ರಶಾಂತ್‌ ನೀಲ್‌ ಹಾಗೂ ತೆಲುಗಿನ ಖ್ಯಾತ ನಟ ಜೂ. ಎನ್‌ಟಿಆರ್‌ ನಟನೆಯಲ್ಲಿ ಮೂಡಿಬರಲಿರುವ ನೂತನ ಚಿತ್ರಕ್ಕೆ ಶುಕ್ರವಾರ ಹೈದರಾಬಾದಿನಲ್ಲಿ ಸಿನಿಮಾ ಮುಹೂರ್ತ ಜರುಗಿತು.

ಸದ್ಯ ʼದೇವರʼ ಚಿತ್ರದಲ್ಲಿ ಬ್ಯೂಸಿಯಾಗಿರುವ ಜೂ. ಎನ್‌ಟಿಆರ್‌ ಅವರು ಪ್ರಶಾಂತ್‌ ನೀಲ್‌ ಜೊತೆಯಲ್ಲಿ ಮುಂದಿನ ಚಿತ್ರ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಅದರಂತೆ ಇಂದು ಮುಹೂರ್ತ ಕೂಡಾ ನಡೆದಿದೆ.

ಹೈದರಾಬಾದಿನ ರಾಮನಾಯ್ಡು ಸ್ಟುಡಿಯೋದಲ್ಲಿ ಜೂ. ಎನ್‌ಟಿಆರ್‌ ಅವರ 31ನೇ ಚಿತ್ರಕ್ಕೆ ಚಾಲನೆ ಸಿಕ್ಕಿತು. ಬಹಳ ಸರಳವಾಗಿ ನಡೆದ ಮುಹೂರ್ತ ಕಾರ್ಯಕ್ರಮದಲ್ಲಿ ಎನ್‌ಟಿಆರ್‌ ಸಹೋದರ ಕಲ್ಯಾಣ್‌ ರಾಮ್‌, ನಿರ್ದೇಶಕ ಪ್ರಶಾಂತ್‌ ನೀಲ್‌, ಅವರ ಕುಟುಂಬದವರಷ್ಟೇ ಭಾಗಿಯಾಗಿದ್ದರು.

ಮೈತ್ರಿ ಮೂವೀಸ್‌ ಮೇಕರ್‌ ಈ ಚಿತ್ರ ನಿರ್ಮಿಸುತ್ತಿದ್ದು, ಈ ಚಿತ್ರಕ್ಕೆ ನ್ಯಾಷನಲ್‌ ಕ್ರಷ್‌ ರಶ್ಮಿಕಾ ಮಂದಣ್ಣ ಅವರು ನಾಯಕಿಯಾಗಿರಲಿದ್ದಾರೆ ಎಂದು ಊಹಿಸಲಾಗಿದೆ. ಇನ್ನು ಈ ಚಿತ್ರ 2026ರ ಜನವರಿ 9 ರಂದು ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿದ್ದು, ಇನ್ನಷ್ಟೆ ಮಾಹಿತಿಯನ್ನು ಚಿತ್ರತಂಡ ಬಿಡುಗಡೆಗೊಳಿಸಬೇಕಿದೆ.

Tags:
error: Content is protected !!