Mysore
29
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಒಲಿಂಪಿಕ್ ಸಮಾರೋಪದಲ್ಲಿ ಮನುಭಾಕರ್ ಜೊತೆ ಶ್ರೀಜೇಶ್ ದ್ವಜಧಾರಿ

ಪ್ಯಾರಿಸ್‌: ಸುಮಾರು ಎರಡು ದಶಕಗಳ ಕಾಲ ಭಾರತದ ಹಾಕಿ ತಂಡದ ಗೋಲ್ ಕೀಪರ್ ಆಗಿ ಗಮನ ಸೆಳೆದಿದ್ದ ಕೇರಳ ಮೂಲದ ಶ್ರೀಜೇಶ್ ಅವರು 2024ರ ಪ್ಯಾರಿಸ್ ಒಲಿಂಪಕ್ ನನ್ನ ಕೊನೆಯ ಕಣ ಎಂದು ಈ ಮೊದಲೇ ಘೋಷಿಸಿದ್ದರು.

ಶ್ರೀಜೇಶ್ ನಿವೃತ್ತಿ ಹೊಂದುತ್ತಿರುವ ಕಾರಣದಿಂದಾಗಿ ಗೌರವ ಸಪರ್ಪಣೆಯ ಕಾರಣದಿಂದಾಗಿ ಮನುಭಾಕರ್ ಅವರೊಂದಿಗೆ ಭಾರತದ ಧ್ವಜಧಾರಿ ಆಯ್ಕೆ ಮಾಡಿರುವುದಾಗಿ ಭಾರತದ ಒಲಿಂಪಿಕ್ ಸಂಸ್ಥೆ ಐಒಎ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ಈ ಬಾರಿಯ ಪ್ಯಾರಿಸ್‌ ಒಲಂಪಿಕ್ಸ್‌ನಲ್ಲಿ ಭಾರತ ಕಂಚಿನ ಪದಕ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶ್ರೀಜೇಶ್‌ ಅವರು, ಒಲಂಪಿಕ್ಸ್‌ನೊಂದಿಗೆ ನಿವೃತ್ತಿಯಾಗುವುದಾಗಿ ಹೇಳಿದ್ದರು. ಇವರಿಗೆ ಗೌರವ ಸೂಚಿಸುವ ಸಲುವಾಗಿ ಧ್ವಜಧಾರಿಯಾಗಿ ಮುನ್ನಡೆಯಲು ಅವಕಾಶ ನೀಡಿದೆ.

ಈ ಬಾರಿಯ ಒಲಿಂಪಿಕ್ ನಲ್ಲೆ ಶ್ರೀಜೆಶ್ ನಿವೃತ್ತರಾಗಿದ್ದು, ಜಾವಲಿನ್ ಥ್ರೋವರ್ ನೀರಜ್ ಚೋಪ್ರ ಅವರನ್ನು ಧ್ವಜಧಾರಿಯಾಗುವಂತೆ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷೆ ಪಿಟಿ ಉಷಾ ಮಾತಕತೆ ನಡೆಸಿದ್ದರು. ಆದರೆ ನೀರಜ್‌ ಧ್ವಜಧಾರಿಯಾಗಿ ಶ್ರೀಜೇಶ್‌ ಅವರನ್ನು ನೇಮಕ ಮಾಡುವಂತ ಹೇಳಿದ್ದರು. ಆದ್ದರಿಂದ ಒಲಿಂಪಿಕ್ಸ್‌ಗೆ ನಿವೃತ್ತಿ ಘೊಷಿಸುತ್ತಿರುವ ಕಾರಣದಿಂದಾಗಿ ಈ ಬಾರಿ ಒಲಿಂಪಿಕ್ ನ ಸಮಾರೋಪ ಸಮಾರಂಭದಲ್ಲಿ ಮನುಭಾಕರ್ ಅವರೊಟ್ಟಿಗೆ ಶ್ರೀಜೇಶ್ ಧ್ವಜಧಾರಿಯಾಗಿ ಭಾರತದ ಬಾವುಟವನ್ನು ಹೊತ್ತು ಭಾಗವಹಿಸಲಿದ್ದಾರೆ.

Tags: