Mysore
27
scattered clouds

Social Media

ಶುಕ್ರವಾರ, 27 ಡಿಸೆಂಬರ್ 2024
Light
Dark

ಒಲಿಂಪಿಕ್ಸ್‌ನಲ್ಲಿ ಅಶಿಸ್ತು ನಡೆ: ಕುಸ್ತಿಪಟು ಅಂತಿಮ್‌ ಪಂಘಲ್‌ಗೆ 3 ವರ್ಷ ನಿಷೇಧ ಸಾಧ್ಯತೆ

ಪ್ಯಾರಿಸ್:‌ ಪ್ಯಾರಿಸ್‌ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಅಶಿಸ್ತು ಪ್ರದರ್ಶಿಸಿದ ಭಾರತದ ಕುಸ್ತಿಪಟು ಅಂತಿಮ್‌ ಪಂಘಲ್‌ ಅವರಿಗೆ ಭಾರತೀಯ ಒಲಿಂಪಿಕ್ಸ್‌ ಸಂಸ್ಥೆ(ಐಒಎ) ಮೂರು ವರ್ಷಗಳ ಕಾಲ ನಿಷೇಧ ಹೇರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಗೇಮ್‌ ವಿಲೇಜ್‌ಗೆ ಪ್ರವೇಶಿಸಲು ಅಂತಿಮ್‌ ಪಂಘಾಲ್‌ ಅವರ ಅಧಿಕೃತ ಕಾರ್ಡ್‌ನ್ನು ಅವರ ಸಹೋದರಿ ನಿಶಾ ಬಳಸಿ ಸಿಕ್ಕಿಬಿದ್ದಿದ್ದಾರೆ. ಈ ಕಾರ್ಡ್‌ ಆಟಗಾರರಲ್ಲದವರು ಬಳಸುವಂತಿಲ್ಲ ಎಂಬ ನಿಯಮವಿದೆ. ಭಾರತೀಯ ತಂಡ ಪ್ಯಾರಿಸ್‌ನಲ್ಲಿ ನಿಯಮ ಮುರಿದ ಮುಜುಗರಕ್ಕೆ ಒಳಗಾದ ಹಿನ್ನೆಲೆ ಐಒಎ ಕ್ರಮ ಕೈಗೊಳ್ಳಲಿದೆ ಎಂದು ಮೂಲಗಳು ಹೇಳಿವೆ.

ಬುಧುವಾರ(ಆ.8) ನಡೆದ ಮಹಿಳೆಯರ ಕುಸ್ತಿ 53 ಕೆ.ಜಿ ವಿಭಾಗದ ಆರಂಭಿಕದಲ್ಲೇ ಸೋತಾ ಅಂತಿಮ್‌ ಕ್ರೀಡಾಕೂಟದಿಂದ ನಿರ್ಗಮಿಸಿದ್ದರು. ಇದೀಗ ಅಂತಿಮ್‌ ಅವರು ಭಾರತಕಕೆ ಆಗಮಿಸಿದ ಬಳಿಕ ನಿಷೇಧಸ ಕುರಿತಂತೆ ಅಧಿಕೃತ ಆದೇಶ ಹೊರಬೀಳಲಿದೆ ಎನ್ನಲಾಗಿದೆ.

ಕ್ರೀಡಾಕೂಟದಿಂದ ಸೋತ ಬಳಿಕ ಅಂತಿಮ್‌ ಪಂಘಲ್‌ ಅವರು ಅಥ್ಲೇಟ್ಸ್‌ ವಿಲೇಜ್‌ಗೆ ತೆರಳದೆ ಕೋಚ್‌ಗಳಿದ್ದ ಹೋಟೆಲ್‌ಗೆ ಬಂದಿದ್ದರು. ಈ ವೇಳೆ ತಮ್ಮ ಸಹೋದರಿಗೆ ಕಾರ್ಡ್‌ ನೀಡಿ ಅಥ್ಲೆಟ್‌ ವಿಲೇಜ್‌ನಿಂದ ತಮ್ಮ ವಸ್ತುಗಳನ್ನು ತರುವಂತೆ ಹೇಳಿ ಕಳುಹಿಸಿದ್ದರು. ಅವರ ಸಹೋದರಿಯನ್ನು ಪ್ರವೇಶ ಮಾಡಿದ ಸಮಯದಲ್ಲಿ ತಡೆಹಿಡಿದ ಭದ್ರತಾ ಸಿಬ್ಬಂದಿ ಸ್ಥಳೀಯ ಪೊಲೀಸ್‌ ಠಾಣೆಗೆ ಕರೆದೊಯ್ದು ಹೇಳಿಕೆ ದಾಖಲಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

Tags: