Mysore
19
clear sky

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಎರಡು ಪದಕ ಗೆದ್ದು ಭಾರತಕ್ಕೆ ಮರಳಿದ ಮನು ಭಾಕರ್‌

ನವದೆಹಲಿ: ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದ ಮೊದಲ ಅಥ್ಲೀಟ್‌ ಎನ್ನುವ ಹೆಗ್ಗಳಿಕೆಗೆ ಪಾತ್ರವಾದ ಮನು ಭಾಕರ್‌ ಅವರಿಂದು ಭಾರತಕ್ಕೆ ಬಂದಿಳಿದಿದ್ದಾರೆ.

ಪ್ಯಾರಿಸ್‌ನಿಂದ ಹೊರಟ ಏರ್‌ ಇಂಡಿಯಾ ವಿಮಾನವು ಇಂದು ಬೆಳಿಗ್ಗೆ ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ಲ್ಯಾಂಡ್‌ ಆಗಿದೆ.

ಈ ವಿಮಾನದಲ್ಲಿ ಮನು ಭಾಕರ್‌ ಅವರು ದೆಹಲಿಗೆ ಬಂದಿಳಿದಿದ್ದು, ಸೋನೆ ಮಳೆಯ ನಡುವೆಯೂ ನೂರಾರು ಮಂದಿ ಮನು ಭಾಕರ್‌ಗೆ ಅದ್ಧೂರಿ ಸ್ವಾಗತ ಕೋರಿದ್ದಾರೆ.

ಮನು ಭಾಕರ್‌ ಅವರ ತವರು ರಾಜ್ಯವಾದ ಉತ್ತರಾಖಂಡ್‌ ಅಧಿಕಾರಿಗಳು, ಕ್ರೀಡಾ ಪ್ರೇಮಿಗಳು ಸೇರಿದಂತೆ ಅನೇಕರು ಮನು ಭಾಕರ್‌ ಅವರನ್ನು ಏರ್‌ಪೋರ್ಟ್‌ನಲ್ಲಿ ಬರಮಾಡಿಕೊಂಡರು.

ಹಾಡು, ನೃತ್ಯ ಹಾಗೂ ತಮಟೆ ಬಾರಿಸುವ ಮೂಲಕ ಭಾಕರ್‌ ಆಗಮನವನ್ನು ಏರ್‌ಪೋರ್ಟ್‌ನಲ್ಲಿ ಸಂಭ್ರಮಿಸಿದರು.
ಶನಿವಾರ ಮತ್ತೆ ಪ್ಯಾರಿಸ್‌ಗೆ ತೆರಳಲಿರುವ ಭಾಕರ್‌ ಅವರು, ಭಾನುವಾರ ನಡೆಯಲಿರುವ ಒಲಿಂಪಿಕ್ಸ್‌ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

Tags: