Mysore
22
mist

Social Media

ಭಾನುವಾರ, 11 ಜನವರಿ 2026
Light
Dark

ಮೈಸೂರಲ್ಲಿ ಜಾಲಿ ರೈಡ್‌ ಹೊರಟ ಸಿಎಂ ಸಿದ್ದರಾಮಯ್ಯ

ಮೈಸೂರು: ರಾಜ್ಯ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿರುವ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರಿಂದ ಪ್ರಾಷಿಕ್ಯೂಷನ್‌ ಭೀತಿ ಎದುರಿಸುತ್ತಿರುವ ಸಿಎಂ ಸಿದ್ದರಾಮಯ್ಯ ಈ ಎಲ್ಲಾ ವಿಚಾರಗಳನ್ನು ಪಕ್ಕಕ್ಕಿಟ್ಟು ಕೆಲಕಾಲ ಮೈಸೂರಿನಲ್ಲಿ ಜಾಲಿ ಮೂಡ್‌ಗೆ ತೆರಳಿದ್ದಾರೆ.

ಮೈಸೂರಿನಲ್ಲಿ ನಿರ್ಮಾಣವಾಗುತ್ತಿರುವ ಸಿದ್ದರಾಮಯ್ಯ ಅವರ ನೂತನ ಮನೆ ನಿರ್ಮಾಣ ಕೆಲಸ ಕಾಮಗಾರಿಗಳನ್ನು ವೀಕ್ಷಿಸಿದ ಸಿಎಂ ಸಿದ್ದರಾಮಯ್ಯ ಎಸ್ಕಾರ್ಟ್‌ ಬಿಟ್ಟು ಸ್ವತಂತ್ರವಾಗಿ ಮೈಸೂರಿನೆಲ್ಲೆಡೆ ಸುತ್ತಾಡಿದ್ದಾರೆ.

ಸಿದ್ದರಾಮಯ್ಯ ಅವರ ಖಾಸಗಿ ವಾಹನಕ್ಕೆ ಮಾಜಿ ಶಾಸಕ ಎಚ್‌.ಪಿ ಮಂಜುನಾಥ್‌ ಡ್ರೈವರ್‌ ಆಗಿ ಜೊತೆಯಲ್ಲಿದ್ದರು.

ಸಾರ್ವಜನಿಕ ಸ್ಥಳದಲ್ಲಿ ಕಾರ್‌ ನಿಲ್ಲಿಸಿ ಸ್ಥಳೀಯ ಅಂಗಡಿಯಲ್ಲಿ ಟೀ ಸವಿದರು. ಬಳಿಕ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಲು ಬಂದ ಸಾರ್ವಜನಿಕರೊಂದಿಗೆ ನಗುನಗುತ್ತಲೇ ಮಾತನಾಡಿದ ಸಿಎಂ ಜನರ ಕಷ್ಟಗಳನ್ನು ಕೇಳಿದರು.

ಇತ್ತ ಬಿಜೆಪಿ-ಜೆಡಿಎಸ್‌ ಮೈತ್ರಿ ಪಕ್ಷಗಳು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಮುಡಾ ಹಗರಣವನ್ನು ಮುಂದಿಟ್ಟು ಮೈಸೂರು ಚಲೋ ಯಾತ್ರೆ ಮಾಡುತ್ತಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ಇದಕ್ಕೆ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂಬದು ಗಮನಾರ್ಹ.

Tags:
error: Content is protected !!