ಪ್ಯಾರಿಸ್: ಸ್ಕೀಟ್ ಮಿಶ್ರ ತಂಡವು ಪ್ಯಾರಿಸ್ ಒಲಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆಲ್ಲುವಲ್ಲಿ ವಿಫಲರಾದರು.
ಶೂಟರ್‌ಗಳಾದ ಮಹೇಶ್ವರಿ ಚೌಹಾನ್ ಹಾಗೂ ಅನಂತ್‌ಜೀತ್ ಸಿಂಗ್ ನರುಕಾ ಅವರು ಚೀನಾ ವಿರುದ್ಧ ಕೂದಲೆಳೆ ಅಂತರದಿಂದ ಸೋಲು ಕಂಡರು. ಆ ಮೂಲಕ ಒಂದೇ ದಿನ ಎರಡು ಪದಕಗಳನ್ನು ಭಾರತ ಕಳೆದುಕೊಂಡಿದೆ.
ಚೀನಾದ ಶೂಟರ್‌ಗಳಾದ ಜಿಯಾಂಗ್ ಯಿಟಿಂಗ್ ಹಾಗೂ ಜಿಯಾನ್ಲಿನ್ ಲ್ಯು ವಿರುದ್ಧ ನಡೆದ ಕಂಚಿನ ಪದಕ ಹೋರಾಟದಲ್ಲಿ ಕೇವಲ ಒಂದು ಅಂಕಗಳ ಅಂತರದಿಂದ ಸೋಲು ಕಂಡಿದೆ. 44-43 ಅಂಕಗಳಿಸಿ ಕೇವಲ ಒಂದು ಅಂಕದಿಂದ ಕಂಚಿನ ಪದಕ ಕಳೆದುಕೊಂಡಿತು.
ಇತ್ತ ಇಟಲಿ 45 ಅಂಕಗಳೊಂದಿಗೆ ಚಿನ್ನ ಗೆದ್ದರೇ, 44 ಅಂಕಗಳಿಸಿದ ಅಮೇರಿಕಾ ಬೆಳ್ಳಿ ಪದಕ ಗೆದ್ದು ಬೀಗಿತು.