Mysore
20
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ವಯನಾಡು ಭೂಕುಸಿತ ಪ್ರಕರಣ: ಸಾವಿನ ಸಂಖ್ಯೆ 350ಕ್ಕೆ ಏರಿಕೆ

ವಯನಾಡು: ಭೀಕರ ಭೂಕುಸಿತಕ್ಕೆ ದೇವರನಾಡು ಕೇರಳ ನಲುಗಿ ಹೋಗಿದ್ದು, ಸಾವಿನ ಸಂಖ್ಯೆ 350ಕ್ಕೆ ಏರಿಕೆಯಾಗಿದೆ.

5ನೇ ದಿನಕ್ಕೆ ಸೇನಾ ಕಾರ್ಯಾಚರಣೆ ಕಾಲಿಟ್ಟಿದ್ದು, ಮರಣೋತ್ತರ ಪರೀಕ್ಷೆ ನಡೆಸಿ ನಡೆಸಿ ವೈದ್ಯರೇ ಸುಸ್ತಾಗಿದ್ದಾರೆ. ಘಟನಾ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದ್ದು, ಆಸ್ಪತ್ರೆಯಲ್ಲಿ ಗಾಯಾಳುಗಳ ಚೀರಾಟ ಮುಂದುವರಿದಿದೆ.
ಭೂಕುಸಿತ ಹಾಗೂ ಪ್ರವಾಹಕ್ಕೆ ಛಿದ್ರಗೊಂಡಿರುವ ದೇಹಗಳು ಘಟನೆಯ ಭೀಕರತೆ ಬೆಚ್ಚಿಡುತ್ತಿವೆ.

ಚಲಿಯಾರ್‌ ನದಿಯಲ್ಲೇ 135ಕ್ಕೂ ಹೆಚ್ಚು ದೇಹಗಳ ಅಂಗಾಂಗಳು ಪತ್ತೆಯಾಗಿವೆ. ಯಾರ ದೇಹ ಯಾರದ್ದು ಅನ್ನೋದೇ ತಿಳಿಯದಂತಹ ಪರಿಸ್ಥಿತಿ ಎದುರಾಗಿದ್ದು, ದೇಹಗಳು ಪ್ರವಾಹದ ರಭಸಕ್ಕೆ ನಜ್ಜುಗುಜ್ಜಾಗಿ ಹೋಗಿವೆ.

ಇಂದು ಸಹ 3 ಸಾವಿರ ಜನರು ಶವಗಳ ಹುಡುಕಾಟದಲ್ಲಿ ತೊಡಗಿದ್ದಾರೆ. ಬಂಡೆಗಳ ಕೆಳಗೆ, ಕೆಸರು, ಕಾಡಿನ ಅಂಚಿನಲ್ಲಿ ಶೋಧ ನಡೆಸುತ್ತಿದ್ದು, 50ಕ್ಕೂ ಹೆಚ್ಚು ಜೆಸಿಬಿಗಳು ಕಾರ್ಯಾಚರಣೆಗೆ ಇಳಿದಿವೆ. ಸ್ಥಳದಲ್ಲಿ ನಾಪತ್ತೆಯಾಗಿರುವ 250ಕ್ಕೂ ಹೆಚ್ಚು ಜನರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಇನ್ನು ವಯನಾಡಿನಲ್ಲಿ ಆಗಸ್ಟ್.‌7ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಮಳೆಯ ನಡುವೆಯೂ ಕಾರ್ಯಾಚರಣೆ ಮುಂದುವರಿದಿದೆ.

 

 

Tags: