ಮೈಸೂರು: ಜೆಡಿಎಸ್-ಬಿಜೆಪಿ ಮೈತ್ರಿ ಪಕ್ಷಗಳಿಂದ ನಡೆಸಲಾಗುತ್ತಿರುವ ಮೈಸೂರು ಚಲೋ ಪಾದಯಾತ್ರೆ ಬಗ್ಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ ಮಹದೇವಪ್ಪ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ನಗರದಲ್ಲಿಂದು (ಆ.3) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯಾದ್ಯಂತ ನೆರೆ, ಹಾನಿ ಸಂಕಷ್ಟಗಳು ಉಂಟಾಗಿದೆ. ಆದರೆ ಬಿಜೆಪಿ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಪ್ರತಿಭಟನೆ ಮಾಡುತ್ತಿದ್ದಾರೆ. ಸಿಎಂ ವಿರುದ್ಧ ಅನಗತ್ಯ ಆರೋಪ ಮಾಡುತ್ತಿರುವ ಇವರನ್ನು ಜವಾಬ್ದಾರಿಯುತ ವಿರೋಧ ಪಕ್ಷದ ನಾಯಕರು ಎನ್ನಬೇಕೆ? ರಾಜ್ಯದ ಬಗ್ಗೆ ಅರಿವಿರುವವರು ಇವರಾದರೇ ಮೊದಲು ಜನರ ಕಷ್ಟದಲ್ಲಿ ಭಾಗಿಯಾಗಲಿ ಎಂದು ಕಿಡಿಕಾರಿದರು.
ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುತ್ತಿರುವ ವಿರೋಧ ಪಕ್ಷಗಳ ಹೇಳಿಕೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಚಳುವಳಿಯಿಂದ ಸಿಎಂ ಸಿದ್ದರಾಮಯ್ಯ ಮನನೊಂದಿಲ್ಲ. ಅವರು ಹಿಂದೆ ಹೇಗೆ ಗುಂಡು ಕಲ್ಲಿನಂತಿದ್ದರೋ ಈಗಲೂ ಹಾಗೆ ಇದ್ದಾರೆ ಎಂದು ಎಚ್‌ಸಿ ಮಹದೇವಪ್ಪ ಹೇಳಿದರು.