ಕಾಂಗ್ರೆಸ್ ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷಿ ಯೋಜನೆಯಡಿ ಮನೆಯ ಯಜಮಾನಿಗೆ ನೀಡುತ್ತಿದ್ದ ೨,೦೦೦ ರೂ. ಹಣ ಸರಿಯಾಗಿ ಫಲಾನುಭವಿಗಳ ಖಾತೆ ಸೇರುತ್ತಿಲ್ಲ. ಗೃಹಲಕ್ಷಿ ಯೋಜನೆ ನಿಂತು ಈಗಾಗಲೇ ೩ ತಿಂಗಳುಗಳು ಕಳೆದಿವೆ. ಅಲ್ಲದೆ ಗೃಹಜ್ಯೋತಿ ಯೋಜನೆಯಡಿ ಉಚಿತವಾಗಿ ನೀಡುವ ೨೦೦ ಯೂನಿಟ್‌ಗಳಿಂತ ಕಡಿಮೆ ವಿದ್ಯುತ್ ಖರ್ಚಾಗಿದ್ದರೂ ವಿದ್ಯುತ್ ಶುಲ್ಕ ವಿಽಸಲಾಗುತ್ತಿದೆ. ಉಳಿದ ಗ್ಯಾರಂಟಿಗಳ ಕಥೆ ಏನಾಗಿದೆಯೋ ಯಾರಿಗೂ ತಿಳಿಯುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಅಽಕಾರಕ್ಕೆ ಬಂದಾಗ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ಮುಂದಿನ ೫ ವರ್ಷಗಳ ಕಾಲ ನಿಲ್ಲಿಸುವ ಮಾತೇ ಇಲ್ಲ ಎಂದಿತ್ತು. ಆದರೆ ಕೇವಲ ಒಂದೇ ವರ್ಷಕ್ಕೆ ಗ್ಯಾರಂಟಿ ಯೋಜನೆಗಳಿಗೆ ಗರಬಡಿದಂತಾಗಿದೆ. ಆದ್ದರಿಂದ ಸರ್ಕಾರ ಕೊಟ್ಟ ಭರವಸೆಯಂತೆಯೇ ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸಲಿ.
-ನಾಗೇಂದ್ರ ಮೂರ್ತಿ ಸೋಸಲೆ, ಹಳೇ ಸೋಸಲೆ, ತಿ. ನರಸೀಪುರ ತಾ.





