Mysore
16
overcast clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ಭಾರತದ ಬ್ಯಾಡ್ಮಿಂಟನ್‌ ತಾರೆ ಅಶ್ವಿನಿ ಪೊನ್ನಪ್ಪ ನಿವೃತ್ತಿ

ಪ್ಯಾರಿಸ್: ಪ್ಯಾರಿಸ್‌ ಕ್ರೀಡಾಕೂಟದಲ್ಲಿ 2024ರಲ್ಲಿ ನಿರಾಶದಾಯಕ ಫಲಿತಾಂಶಗಳ ನಂತರ ಐದು ಬಾರಿಯ ಕಾಮನ್‌ವೆಲ್ತ್‌ ಕ್ರೀಡಾಕೂಟದ ಪದಕ ವಿಜೇತೆ ಭಾರತದ ಬ್ಯಾಡ್ಮಿಂಟನ್‌ ತಾರೆ ಅಶ್ವಿನಿ ಪೊನ್ನಪ್ಪ ಅವರು ತಮ್ಮ ಒಲಿಂಪಿಕ್ಸ್‌ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ.

ಪ್ಯಾರಿಸ್‌ ಕ್ರೀಡಾಕೂಟದ ಮಹಿಳೆಯರ ಡಬಲ್ಸ್‌ನಲ್ಲಿ ಕನ್ನಡತಿ ಅಶ್ವಿನಿ ಪೊನ್ನಪ್ಪ ಮತ್ತು ತನಿಶಾ ಕ್ರಾಸ್ಟೋ ಸತತ ಮೂರನೇ ಬಾರಿಗೆ ಸೋಲನ್ನು ಎದುರಿಸಬೇಕಾಯಿತು. ನಿನ್ನೆ ನಡೆದ ಸಿ ಗುಂಪಿನ ಅಂತಿಮ ಪಂದ್ಯದಲ್ಲಿ ಅಶ್ವಿನಿ ಮತ್ತು ತನಿಖಾ 15-21, 10-21ರಲ್ಲಿ ಆಸ್ಟ್ರೇಲಿಯಾದ ಸೆಟಿಯಾನಾ ಮಪಾಸಾ ಮತ್ತು ಏಂಜೆಲಾಯು ವಿರುದ್ಧ ಸೋಲು ಅನುಭವಿಸಬೇಕಾಯಿತು.

ಮೂರನೇ ಒಲಿಂಪಿಕ್ಸ್‌ ಆಡುತ್ತಿರುವ 34 ವರ್ಷದ ಅಶ್ವಿನಿ 2028ರ ಲಾಸ್‌ ಏಂಜನೀಸ್‌ ಗೇಮ್ಸ್‌ನಲ್ಲಿ ಆಡಲು ಬಯಸುತ್ತೀರಾ ಎಂದು ಕೇಳಿದಾಗ ಇದು ನನ್ನ ಕೊನೆಯ ಒಲಿಂಪಿಕ್ಸ್‌ ಆಗಿರುತ್ತದೆ. ಆದರೆ ತನಿಖಾ ಇನ್ನೂ ಬಹಳ ದೂರ ಸಾಗಬೇಕಿದೆ ಎಂದು ಹೇಳಿದ್ದಾರೆ.

ಈ ಸೋಲು ಭಾವನಾತ್ಮಕ ಮತ್ತು ಮಾನಸಿಕವಾಗಿ ತುಂಬಾ ಪ್ರಭಾವ ಬೀರಿದೆ. ಇಂತಹ ಪರಿಸ್ಥಿತಿಯನ್ನು ಮತ್ತೆ ನಾನು ಎದುರಿಸಲಾರೆ ಎಂದು ಅಶ್ವಿನಿ ಪೊನ್ನಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

 

Tags:
error: Content is protected !!