ಕೊಡಗು: ತಡರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜಿಲ್ಲೆಯ ಭಾಗಮಂಡಲದ ತ್ರಿವೇಣಿ ಸಂಗಮ ಭಾಗಶಃ ಮುಳುಗಿ ಹೋಗಿದೆ.
ಸೋಮವಾರ ರಾತ್ರಿಯಿಂದ ಭಾಗಮಂಡಲದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಇದರಿಂದಾಗಿ ಇಲ್ಲಿನ ತ್ರಿವೇಣಿ ಸಂಗಮ ಸಂಪೂರ್ಣವಾಗಿ ಮುಳುಗಡೆಯಾಗಿದೆ ಹಾಗೂ ಅಲ್ಲಿನ ಸ್ಥಳೀಯ ಪ್ರಸಿದ್ಧ ದೇವಾಲಯ ಭಗಂಡೇಶ್ವರ ಸನ್ನಿದಿಗೂ ನೀರು ನುಗ್ಗಿದೆ.
ಭಗಂಡೇಶ್ವರ್ ದೇವಾಲಯದ ಮುಂಭಾಗದ ಮೆಟ್ಟಿಲುಗಳು ಸಂಪೂರ್ಣವಾಗಿ ಜಲಾವೃತವಾಗಿದ್ದು, ದೇವಾಲಯದ ಬಾಗಿಲುಗಳನ್ನು ಮುಚ್ಚಲಾಗದೆ.
ದಿನೇ ದಿನೇ ಕೊಡಗು ಜಿಲ್ಲೆಯಲ್ಲಿ ವಿಪರೀತ ಮಳೆಯಾಗುತ್ತಿದ್ದು, ಪ್ರವಾಹದ ಮುನ್ಸೂಚನೆ ಎದುರಾಗಿದೆ. ಭಾಗಮಂಡಲ ಪೂರ್ಣವಾಗಿ ಜಲಾವೃತವಾಗಿದ್ದಯ, ಮಡಿಕೇರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮುಳುಗಡೆಯಾಗಿದೆ. ಜನರೆಲ್ಲರೂ ಸಂಕಷ್ಟದ ಸ್ಥಿತಿ ಎದುರಿಸುತ್ತಿದ್ದಾರೆ.