Mysore
16
scattered clouds

Social Media

ಸೋಮವಾರ, 15 ಡಿಸೆಂಬರ್ 2025
Light
Dark

ಹಿಂದಿಗೆ ರಮೇಶ್‍ ರೆಡ್ಡಿ; ‘ಘುಸ್ಪೈಥಿಯಾ’ ಚಿತ್ರ ನಿರ್ಮಾಣ

ಕನ್ನಡದಲ್ಲಿ ‘ಗಾಳಿಪಟ 2’, ‘100’, ‘ಉಪ್ಪು ಹುಳಿ ಖಾರ’ ಸೇರಿದಂತೆ ಕೆಲವು ಚಿತ್ರಗಳನ್ನು ನಿರ್ಮಿಸಿರುವ ರಮೆಶ್‍ ರೆಡ್ಡಿ, ಇದೀಗ ಹಿಂದಿಯಲ್ಲೊಂದು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕೆಲವು ವರ್ಷಗಳ ಹಿಂದೆಯೇ ಈ ಚಿತ್ರವನ್ನು ಅವರು ಪ್ರಾರಂಭಿಸಿದ್ದು, ಚಿತ್ರವು ಆಗಸ್ಟ್ 09ರಂದು ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು ಈ ಚಿತ್ರದ ಟ್ರೇಲರ್‍, ಶನಿವಾರ ಮುಂಬೈನಲ್ಲಿ ಬಿಡುಗಡೆ ಆಗಿದೆ.

‘ಘುಸ್ಪೈಥಿಯಾ‘ (Ghuspaithiya) ಚಿತ್ರವನ್ನು ರಮೇಶ್ ರೆಡ್ಡಿ, ಜ್ಯೋತಿಕ ಶೆಣೈ ಹಾಗೂ ಮಂಜರಿ ಸುಸಿ ಗಣೇಶನ್ ಜೊತೆಯಾಗಿ ನಿರ್ಮಿಸಿದ್ದಾರೆ. ಈ ಚಿತ್ರವನ್ನು ಸುಸಿ ಗಣೇಶನ್ ನಿರ್ದೇಶಿಸಿದ್ದಾರೆ. ಸೈಬರ್ ಕ್ರೈಮ್ ಕಥಾಹಂದರ ಹೊಂದಿರುವ ಈ ಚಿತ್ರವು ತಮಿಳಿನ ‘ತಿರುಟ್ಟುಪಯಲೆ 2’ ಚಿತ್ರದ ರೀಮೇಕ್‍ ಆಗಿದೆ. ಇದೇ ಚಿತ್ರವನ್ನು ರಮೇಶ್‍ ರೆಡ್ಡಿ, ಕನ್ನಡದಲ್ಲಿ ರಮೇಶ್‍ ಅರವಿಂದ್ ನಿರ್ದೇಶನದಲ್ಲಿ ‘100’ ಎಂಬ ಚಿತ್ರ ನಿರ್ಮಿಸಿದ್ದರು. ಈಗ ಸುಸಿ ಗಣೇಶನ್‍ ಮತ್ತು ರಮೇಶ್‍ ರೆಡ್ಡಿ ಇಬ್ಬರೂ ಚಿತ್ರವನ್ನು ಹಿಂದಿಗೆ ತೆಗೆದುಕೊಂಡು ಹೋಗಿದ್ದಾರೆ.

ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಕನ್ನಡದಲ್ಲೇ ಮಾತನಾಡಿ ಎಲ್ಲರ ಗಮನ ಸೆಳೆದ ನಿರ್ಮಾಪಕ ರಮೇಶ್ ರೆಡ್ಡಿ, ‘ಈ ಚಿತ್ರಕ್ಕೆ ನಿಮ್ಮೆಲ್ಲರ ಸಹಕಾರವಿರಲಿ. ಮುಂದೆ ಕೂಡ ಹಿಂದಿ ಚಿತ್ರಗಳನ್ನು ನಿರ್ಮಿಸುತ್ತೇನೆ’ ಎಂದು ಹೇಳಿದ್ದಾರೆ.

‘ಘುಸ್ಪೈಥಿಯಾ‘ ಚಿತ್ರದಲ್ಲಿ ವಿನೀತ್ ಕುಮಾರ್ ಸಿಂಗ್, ಊರ್ವಶಿ ರೌಟೇಲ, ಅಕ್ಷಯ್ ಒಬೆರಾಯ್ ಮುಂತಾದವರು ನಟಿಸಿರುವ ಈ ಚಿತ್ರವು ಆಗಸ್ಟ್ 9ರಂದು AA ಫಿಲಂಸ್ ಮೂಲಕ ಬಿಡುಗಡೆಯಾಗಲಿದೆ.

Tags:
error: Content is protected !!