Mysore
26
few clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಮೂಲಸೌಕರ್ಯಕ್ಕೂ ಮುನ್ನವೇ ನಿವೇಶನ ಭಾಗ

ಮುಡಾದ ಹಣದಲ್ಲಿ ಖಾಸಗಿ ಬಡಾವಣೆಗಳ ಅಭಿವೃದ್ಧಿಗೆ ವ್ಯಯ, ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಕ್ಕೆ ಕಾದಿರುವ ಪ್ರಮುಖ ಬಡಾವಣೆಗಳು

  • ಕೆ.ಬಿ.ರಮೇಶನಾಯಕ

ಮೈಸೂರು: ಹಲವಾರು ವರ್ಷಗಳಿಂದ ಚಾತಕಪಕ್ಷಿಯಂತೆ ನಿವೇಶನಕ್ಕಾಗಿ ಕಾದಿರುವ ಬಡವರು, ಮಧ್ಯಮ ವರ್ಗದ ನಿವೇಶನಾ ಕಾಂಕ್ಷಿಗಳಿಗೆ ಬಡಾವಣೆಗಳನ್ನು ರಚಿಸಿ ಹಂಚಿಕೆ ಮಾಡುವುದಕ್ಕೆ ಒಲವು ತೋರದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು, ಖಾಸಗಿ ಬಡಾವಣೆಗಳಲ್ಲಿ ಮೂಲ ಸೌಕರ್ಯ ವನ್ನು ಪೂರ್ಣಗೊಳಿಸುವ ಮುನ್ನವೇ ಅಂತಿಮ ಕಂತಿನ ನಿವೇಶನ ಬಿಡುಗಡೆಯ ಜತೆಗೆ ಅಭಿವೃದ್ಧಿಗಾಗಿ ಪ್ರತಿ ವರ್ಷ ಕೋಟಿಗಟ್ಟಲೆ ವ್ಯಯ ಮಾಡಿರುವುದು ಕಂಡುಬಂದಿದೆ.

ಖಾಸಗಿ ಬಡಾವಣೆಗಳಿಂದ ಬಂದಿರುವ ಆದಾಯಕ್ಕಿಂತ ಅಭಿವೃದ್ದಿಗಾಗಿ ಮುಡಾ ಖರ್ಚು ಮಾಡಿರುವ ಅನುದಾನವೇ ದುಪ್ಪಟ್ಟಾ ಗಿದೆ. ಇದರಿಂದಾಗಿ, ಮೂಲ ಸೌಕರ್ಯ ಗಳನು ಕಲಿಸದೆ ಇರುವ ಖಾಸಗಿ ಬಡಾವಣೆ ಗಳಿಗೂ ಮುಡಾದಿಂದಲೇ ಅನುದಾನ ಬಳಕೆ ಮಾಡಿರುವುದು ಗಮನಾರ್ಹವಾಗಿದೆ.

ಬೆಂಗಳೂರು ನಂತರ ವೇಗವಾಗಿ ಬೆಳೆಯು ತಿರುವ ಅರಮನೆಗಳ ನಗರಿ ಮೈಸೂರು ವರ್ಷದಿಂದ ವರ್ಷಕ್ಕೆ ವಿಸ್ತಾರಗೊಳ್ಳುತ್ತಿದೆ. ದಕ್ಷಿಣಕಾಶಿ ನಂಜನಗೂಡು, ಶ್ರೀರಂಗಪಟ್ಟಣ ಮುಡಾ ವ್ಯಾಪ್ತಿಯ ಮಹಾಯೋಜನೆಯಲ್ಲಿ ಸೇರಿಕೊಂಡು ಮತ್ತಷ್ಟು ಪಸರಿಸಿಕೊಂಡಿದೆ. ಹೀಗಿದ್ದರೂ, ಕಳೆದ ಒಂದು ದಶಕದಿಂದ ರೈತರ ಜಮೀನನು ಸ್ವಾಧೀನಪಡಿಸಿಕೊಂಡು ಯಾವುದೇ ಹೊಸ ಬಡಾವಣೆಗಳನ್ನು ರಚನೆ ಮಾಡದ ಮುಡಾವು ಖಾಸಗಿ ಬಡಾವಣೆಗಳಿಗೆ ಬೇಕಾದ ವಸತಿ ವಿನ್ಯಾಸ ನಕ್ಷೆ ಅನುಮೋದನೆ ಕೊಡುವುದಕ್ಕೆ ಮಾತ್ರ ಸೀಮಿತವಾಗಿದೆ.

ಹೀಗಾಗಿ, ಮೈಸೂರು ನಗರದ ಹುಣ ಸೂರು, ಎಚ್.ಡಿ.ಕೋಟೆ, ತಿ.ನರಸೀಪುರ, ನಂಜನಗೂಡು, ಬನ್ನೂರು ಮಾರ್ಗದ ರಸ್ತೆಯಲ್ಲಿ ಒಂದೂವರೆ ಸಾವಿರಕ್ಕೂ ಹೆಚ್ಚು ಖಾಸಗಿ ಬಡಾವಣೆಗಳು ರಚನೆಯಾಗಿ ನಿವೇಶನ ಗಳನ್ನು ಹಂಚಿಕೆ ಮಾಡಿವೆ. ಶ್ರೀರಾಂಪುರ, ಚಾಮಲಾಪುರ, ರಿಂಗ್ ರಸ್ತೆ,ಬೋಗಾದಿ ರಸ್ತೆ ಕೆ.ಆರ್.ಎಸ್.ರಸ್ತೆಯಲ್ಲಿ ರಚನೆಯಾಗಿರುವ ಬಹುತೇಕ ಬಡಾವಣೆಗಳಲ್ಲಿ ಅನೇಕರು ಮನೆಗಳನ್ನು ಕಟ್ಟಿಕೊಂಡು ವಾಸ ಮಾಡು ತ್ತಿದ್ದಾರೆ. ಮುಡಾದಿಂದ ಅಂತಿಮ ಕಂತಿನ ನಿವೇಶನ ಬಿಡುಗಡೆ ಮಾಡುವ ಮುನ್ನ ಕುಡಿಯುವ ನೀರು, ರಸ್ತೆ, ಒಳಚರಂಡಿ, ವಿದ್ಯುತ್ ದೀಪ ಕಲ್ಪಿಸಲಾಗಿದೆಯೇ ಎನ್ನು ವುದರ ವರದಿ ಪಡೆದುಕೊಂಡು ಅನು ಮೋದನೆ ಕೊಡಬೇಕು. ಇದಕ್ಕೆ ಪೂರಕವಾಗಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ನಿರಾಕ್ಷೇ ಪಣಾ ಪಣಾ ಪತ್ರ, ಸಿವಿಲ್ ಕಾಮಗಾರಿ ಮುಗಿದಿರುವುದಕ್ಕೆ ಮೂರನೇ ವ್ಯಕ್ತಿಯಿಂದ ಪರಿಶೀಲನೆನಡೆಸಿ ವರದಿ ಪಡೆಯಬೇಕಾಗಿದೆ.

ಆದರೆ, ಈ ಎಲ್ಲವನ್ನು ಬದಿಗೊತ್ತಿರುವ ಅಧಿಕಾರಿಗಳು ಪ್ರಾಧಿಕಾರದ ಸಭೆಯಲ್ಲಿ ನಿವೇಶನ ಬಿಡುಗಡೆಗೆ ಒಪ್ಪಿಗೆ ಸಿಗುವಂತೆ ನೋಡಿಕೊಂಡಿರುವುದರಿಂದ ದೊಡ್ಡ ಹೊರೆ ಯಾಗಿ ಪರಿಣಮಿಸಿದೆ.

ಅಭಿವೃದ್ಧಿಗಾಗಿ ಅನುದಾನ ಬಳಕೆ: ಖಾಸಗಿ ಬಡಾವಣೆಗಳ ಅಭಿವೃದ್ಧಿಗಾಗಿ ಮುಡಾದಲ್ಲಿ ಅಭಿವೃದ್ಧಿ ನಿಧಿ-1ರಲ್ಲಿ ಲಭ್ಯವಿರುವ ಅನು ದಾನವನ್ನು ಅಭಿವೃದ್ಧಿ ನಿಧಿ-2ಕ್ಕೆ ವರ್ಗಾಯಿಸಿ ಕೊಂಡು ಹಲವು ಕಾಮಗಾರಿಗಳನ್ನು ಮಾಡ ಲಾಗಿದೆ. 2022-23ರಲ್ಲಿ 178 ಮುಂದುವರಿದ ಕಾಮಗಾರಿಗಳಿಗೆ 4095.20 ಲಕ್ಷ ರೂ ಖರ್ಚು ಮಾಡಿದ್ದರೆ, 235 ಹೊಸ ಕಾಮ ಗಾರಿಗಳಿಗೆ 29065.42 ಲಕ್ಷ ರೂ. ಖರ್ಚು ಮಾಡಲಾಗಿದೆ. ಇದಲ್ಲದೆ, 446.30 ಲಕ್ಷ ರೂ. ವೆಚ್ಚದ ಕಾಮಗಾರಿಗಳ ಕ್ರಿಯಾಯೋಜ ನೆಗೆ ಅನುಮೋದನೆ ಕೋರಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಿತ್ತಾದರೂ ಸದ್ಗತಿ ದೊರೆತಿಲ್ಲ ಎನ್ನುವುದು ಕಂಡುಬಂದಿದೆ.

ಹಸ್ತಾಂತರಕ್ಕೆ ಕಾದಿರುವ ಬಡಾವಣೆಗಳು: ನಗರದ ರಿಂಗ್ ರಸ್ತೆಯ ಹೊರಗೆ ರಚನೆ ಯಾಗಿರುವ ಖಾಸಗಿ ಬಡಾವಣೆಗಳನ್ನು ಹೂಟಗಳ್ಳಿ ನಗರಸಭೆ, ಬೋಗಾದಿ, ಶ್ರೀರಾಂ ಪುರ, ರಮ್ಮನಹಳ್ಳಿ, ಕಡಕೊಳ ಪಟ್ಟಣ ಪಂಚಾಯಿತಿಗೆ ಹಸ್ತಾಂತರಿಸಲು ತೀರ್ಮಾ ನಿಸಿ ಸರ್ಕಾರದ ಅನುಮತಿ ಕೋರಿದ್ದರೂ ಅಧಿಕೃತವಾಗಿ ಸೇರಿಲ್ಲ.

ಹೊಸದಾಗಿ ರಚನೆಯಾಗಿರುವ ಸ್ಥಳೀಯ ಸಂಸ್ಥೆಗಳು ಮೂಲ ಸೌಕರ್ಯ ಒದಗಿಸಲು ಅನು ದಾನದ ಕೊರತೆ ಎದುರಿಸುತ್ತಿರುವ ಕಾರಣ ಮುಡಾಕ್ಕೆ ಸಂಗ್ರಹಿಸಿದ ಮೂರು ವರ್ಷಗಳ ತೆರಿಗೆ ಮೊತ್ತ ಹಾಗೂ ಅಭಿವೃದ್ಧಿಗೆ ಬೇಕಾದ ಅನುದಾನವನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿ ಕಾದುಕುಳಿತಿದೆ.

ಮತ್ತೊಂ ದೆಡೆ ಖಾಸಗಿ ಬಡಾವಣೆಗಳನ್ನು ನಗರ ಪಾಲಿಕೆ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ಸೇರಿಸು ವಂತೆ ನಿವಾಸಿಗಳು ಒತ್ತಡ ಹೇರುತ್ತಲೇ ಬಂದಿದ್ದರೂ ಸಾಧ್ಯವಾಗಿಲ್ಲದ ಕಾರಣ ಸ್ಥಳೀಯ ಜನಪ್ರತಿನಿಧಿಗಳ ಮೇಲೆ ತೀವ್ರ ಒತ್ತಡ ಹೇರುತ್ತಿದ್ದಾರೆ.

ಈಗಾಗಲೇ ಬಡಾ ವಣೆಗಳ ನಿವಾಸಿಗಳು ತಮ್ಮದೇ ಆದ ಬಡಾ ವಣೆಯ ಒಕ್ಕೂಟ ರಚನೆ ಮಾಡಿಕೊಂಡು ಪ್ರತಿಭಟನೆ ದಾರಿ ಹಿಡಿದಿರುವುದನ್ನು ಗಮನಿಸಬಹುದಾಗಿದೆ.

 

  • ಪ್ರಮುಖ ಬೇಡಿಕೆಗಳು
  •  ಕಾವೇರಿ ನೀರನ್ನು ಒಕ್ಕೂಟದ ವ್ಯಾಪ್ತಿಯ ಎಲ್ಲ ಬಡಾವಣೆಗಳಿಗೆ ಒದಗಿಸಬೇಕು
  •  ಒಳಚರಂಡಿ ವ್ಯವಸ್ಥೆಯನ್ನು ಸುವ್ಯಸ್ಥಿತಗೊಳಿಸಬೇಕು
  • ಜನಸಾಂದ್ರತೆಗೆ ಅನುಗುಣವಾಗಿ ತ್ಯಾಜ್ಯ ಶುದ್ದೀಕರಣ ಘಟಕ ತೆರೆಯುವುದು.
  • ಆ ಮೂಲಕ ಶುದ್ದೀಕರಣ ಮಾಡಿದ ನೀರನ್ನು ಕೃಷಿ ಆಧಾರಿತ ಚಟುವಟಿಕೆಗಳಿಗೆ
    ಮರುಬಳಕೆ ಮಾಡುವ ಯೋಜನೆ ರೂಪಿಸಿ ಅನುಷ್ಠಾನಗೊಳಿಸಬೇಕು
  • ಒಳಚರಂಡಿ ವ್ಯವಸ್ಥೆಯ ಅಂತರ ಸಂಪರ್ಕ ಜಾಲವನ್ನು ವಿಸ್ತರಿಸಿ ಸದೃಢಗೊಳಿಸಬೇಕು
  • ಅವೈಜ್ಞಾನಿಕ ವಿದ್ಯುತ್ ವ್ಯವಸ್ಥೆ ಸರಿಪಡಿಸುವುದು ಹಾಗೂ ಸಮರ್ಪಕ ವಿದ್ಯುತ್‌ ವ್ಯವಸ್ಥೆ ಕಲ್ಪಿಸಬೇಕು
  • ರಾಜಕಾಲುವೆ ಒತ್ತುವರಿ ತೆರವು ಮಾಡುವುದು ಹಾಗೂ ಮಳೆ ನೀರು ಸುಗಮವಾಗಿ ಹರಿಯಲು ಅವಕಾಶ ಕಲ್ಪಿಸಬೇಕು.
Tags: