Mysore
29
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಒಲಿಂಪಿಕ್ಸ್ 2024:‌ ಶೂಟಿಂಗ್‌ನಲ್ಲಿ ಚಿನ್ನ ಗೆದ್ದ ಚೀನಾ

ಪ್ಯಾರಿಸ್:‌ ಪ್ಯಾರಿಸ್‌ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಚೀನಾವೂ ಶೂಟಿಂಗ್‌ ಸ್ಪರ್ಧೆಯಲ್ಲಿ ಚಿನ್ನ ಗೆದ್ದುಕೊಂಡಿದೆ. ಮೊದಲ ಚಿನ್ನ ಗೆದ್ದ ಚೀನಾ ಶುಭಾರಂಭ ಮಾಡಿಕೊಂಡಿದೆ.

ಶೂಟಿಂಗ್10 ಮೀಟರ್‌ ಏರ್‌ ರೈಫಲ್‌ ಮಿಶ್ರ ತಂಡ ವಿಭಾಗದಲ್ಲಿ ಸ್ಪರ್ಧಿಗಳು ಈ ಸಾಧನೆ ಮಾಡಿದ್ದಾರೆ. ಚೀನಾದ ಹುವಾನ್‌ ಯುಟಿಂಗ್‌ ಮತ್ತು ಶೆಂಗ್‌ ಲಿಹಾವೊ ಜೋಡಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದೆ. ಫೈನಲ್‌ನಲ್ಲಿ 16-12ರ ಅಂತರದಲ್ಲಿ ಚೀನಾದ ಜೋಡಿಯು ಕೋರಿಯಾ ವಿರುದ್ಧ ಜಯ ಗಳಿಸಿದೆ.

ಇದೇ ವಿಭಾಗದಲ್ಲಿ ಕೋರಿಯಾದ ಕೆಯಮ್‌ ಜಿ-ಹೈಯಾನ್‌ ಮತ್ತು ಪಾರ್ಕ್‌ ಹಾ-ಜುನ್‌ ಜೋಡಿ ಬೆಳ್ಳಿ ಮತ್ತು ಕಜಕಿಸ್ತಾನದ ಅಲೆಕ್ಸಾಂಡರ್‌ ಲೆ ಮತ್ತು ಇಸ್ಲಾಂ ಸತ್ಪಯೇವ್‌ ಜೋಡಿ ಕಂಚಿನ ಪದಕ ಗೆದ್ದಿದೆ.

ಮೂರು ವರ್ಷಗಳ ಹಿಂದಿನ ಟೊಕಿಯೊ ಒಲಿಂಪಿಕ್ಸ್‌ನಲ್ಲೂ ಶೂಟಿಂಗ್‌ ವಿಭಾಗದಲ್ಲಿ ಚೀನಾ ದೇಶದ ಸ್ಪರ್ಧಿಗಳೇ ಚಿನ್ನದ ಪದಕ ಗಳಿಸಿದ್ದರು.

Tags: