Mysore
34
few clouds

Social Media

ಮಂಗಳವಾರ, 24 ಮಾರ್ಚ್ 2026
Light
Dark

ಕೊಡಗಿನಲ್ಲಿ ವ್ಯಾಪಕ ಮಳೆ: ಮುಂದುವರೆದ ಶಾಲಾ ಕಾಲೇಜು ರಜೆ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ನಿರಂತರ ಮಳೆಗೆ ಜನಜೀವನ ಹೈರಾಣಾಗಿದೆ. ಕಳೆದ ವಾರದಿಂದ ತೀವ್ರ ಸ್ವರೂಪ ಪಡೆದುಕೊಂಡಿರುವ ಮಳೆ ಜಿಲ್ಲೆಯಲ್ಲಿ ಭಾರಿ ಆವಾಂತರ ಸೃಷ್ಟಿಸಿದೆ.

ಗಾಳಿ ಮಳೆಗೆ ಮರಗಳು ಧರೆಗುರುಳುತ್ತಿದ್ದು, ರಸ್ತೆಯ ಪಕ್ಕದ ಗುಡ್ಡದ ಮಣ್ಣು ಕುಸಿಯುತ್ತಿದೆ. ನಾಳೆಯು ಸಹ ಮಳೆ ಅಬ್ಬರಿಸಲಿದ್ದು. ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಅಂಗನವಾಡಿ ಸೇರಿದಂತೆ ಶಾಲಾ-ಕಾಲೇಜಿಗಳಿಗೆ ಶುಕ್ರವಾರ(ಜು.26) ಸಹ ರಜೆ ಘೋಷಿಸಿದೆ.

ಕೊಡಗು ಜಿಲ್ಲಾದ್ಯಂತ ಅಂಗನವಾಡಿ, ಪ್ರಾಥಮಿಕ ಶಾಲೆ, ಪ್ರೌಢ ಶಾಲೆ,ಕಾಲೇಜುಗಳಿಗೆ ( ಪದವಿ ಪೂರ್ವ ) ಜಿಲ್ಲಾಧಿಕಾರಿಗಳು ರಜೆ ಘೋಷಣೆ ಮಾಡಿದ್ದಾರೆ.

Tags:
error: Content is protected !!