ಮಡಿಕೇರಿ: ರಾಜ್ಯದ ಹಲವು ಭಾಗಗಳಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಅಲ್ಲಲ್ಲಿ ಭೂ ಕುಸಿತದಂತಹ ಪ್ರಕೃತಿ ವಿಕೋಪಗಳು ಸಂಭವಿಸುತ್ತಲೇ ಇದೆ. ಕೊಡಗು ಜಿಲ್ಲೆಯಲ್ಲೂ ಮಳೆ ಆರ್ಭಟ ಮುಂದುವರೆದಿದ್ದು, ಮಳೆಗೆ ಕರ್ನಾಟಕ-ಕೇರಳ ರಾಜ್ಯ ಹೆದ್ದಾರಿಯ ರಸ್ತೆ ಬದಿ ಕುಸಿದು ತೋಡಿಗೆ ಮಣ್ಣು ಬಿದ್ದಿದೆ.
ನೆರೆಯ ಕೇರಳ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಗೋಣಿಕೊಪ್ಪಲು ಕುಟ್ಟ ರಾಜ್ಯ ಹೆದ್ದಾರಿ ಕುಟ್ಟದಿಂದ 3 ಕಿ.ಮೀ ದೂರದಲ್ಲಿ ಶ್ರೀಮಂಗಲ ಕಡೆಗೆ ಬರುವ ರಸ್ತೆ ಮಾರ್ಗದ ಎಡಬದಿ ರಸ್ತೆ ಕುಸಿದು ತೋಡಿಗೆ ಮಣ್ಣು ಬಿದ್ದಿದ್ದು, ವಾಹನ ಸಂಚಾರರು ತಿರುಗಾಡಲು ಹರಸಾಹಸ ಪಡುತ್ತಿದ್ದಾರೆ.
ಇನ್ನೂ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕುಟ್ಟಾ ಠಾಣಾಧಿಕಾರಿ ಮಹದೇವ್ ಹಾಗೂ ಸಿಬ್ಬಂದಿಗಳು ಬಾರಿಕೇಡ್ ಅಳವಡಿಸಿ ರಸ್ತೆಯ ಒಂದು ಭಾಗದಲ್ಲಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.