Mysore
22
mist

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಕೇಂದ್ರ ಬಜೆಟ್‌ ಬಗ್ಗೆ ಗೋವಿಂದ ಕಾರಜೋಳ ಹಾಗೂ ಬಸವರಾಜ ಬೊಮ್ಮಾಯಿ ಸಂತಸ

ನವದೆಹಲಿ: ಇಂದು ಮಂಡನೆಯಾದ ಕೇಂದ್ರ ಬಜೆಟ್‌ ಬಗ್ಗೆ ಸಂಸದರಾದ ಗೋವಿಂದ ಕಾರಜೋಳ ಹಾಗೂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೂರನೇ ಅವಧಿಯ ಮೊದಲ ಬಜೆಟ್‌ ಮಂಡನೆಯಾಗಿದ್ದು, ಬಜೆಟ್‌ ಬಗ್ಗೆ ಬಿಜೆಪಿ ಸಂಸದರು ತೀವ್ರ ಸಂತೋಷದಲ್ಲಿದ್ದಾರೆ.

ಇಂದು ಮಂಡನೆಯಾದ ಕೇಂದ್ರ ಬಜೆಟ್‌ ಬಗ್ಗೆ ದೆಹಲಿಯಲ್ಲಿ ಮಾತನಾಡಿದ ಸಂಸದ ಗೋವಿಂದ ಕಾರಜೋಳ ಅವರು, ಮುದ್ರಾಸಾಲ ಯೋಜನೆ ಹೆಚ್ಚಳವಾಗಿದ್ದು, ಎಲ್ಲರಿಗೂ ಇದು ಅನುಕೂಲವಾಗಲಿದೆ. ಯುವಕರಿಗೆ ಉದ್ಯೋಗ ಸೃಷ್ಟಿಗೆ ಹೊಸ ವ್ಯವಸ್ಥೆ ರೂಪಿಸಲಾಗಿದ್ದು, ಕೇಂದ್ರ ಸರ್ಕಾರ ಬಜೆಟ್‌ ತೃಪ್ತಿದಾಯಕವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಇನ್ನೂ ಕೇಂದ್ರ ಬಜೆಟ್‌ ಬಗ್ಗೆ ಸಂಸದ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು, ಇದು ಅಭಿವೃದ್ದಿ ಪರ ಬಜೆಟ್‌. ಆರ್ಥಿಕ ಸುಧಾರಣೆಗೆ ಉತ್ತಮ ಹೆಜ್ಜೆ ಇಟ್ಟಿದ್ದೇವೆ. ರಾಜ್ಯಕ್ಕೆ ರೈಲು, ರಸ್ತೆ ಕ್ಷೇತ್ರಗಳಿಗೆ ಅನುದಾನ ನೀಡಲಾಗಿದೆ. 12 ಕೈಗಾರಿಕಾ ಕಾರಿಡಾರ್‌ಗಳಿಂದ ಲಾಭ ಆಗಲಿದೆ ಎಂದರು.

 

 

Tags: